[ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸೋಣವೇ? – 12-July-2024 ಪ್ರಜಾವಾಣಿಯಲ್ಲಿನ ಲೇಖನ]– ಅರವಿಂದ ಚೊಕ್ಕಾಡಿ ಹೊಸ ಶೈಕ್ಷಣಿಕ ವರ್ಷ ಶುರುವಾಗಿ ಒಂದು ತಿಂಗಳು ಕಳೆದಿದೆ. ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿ ಆಗುವ ಎಡವಟ್ಟುಗಳನ್ನು ಈಗಿನಿಂದಲೇ ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಶಾಲಾ ವ್ಯವಸ್ಥೆಯಲ್ಲಿ, ಪರೀಕ್ಷೆಗೆ ಒಂದು ತಿಂಗಳೋ, ಹದಿನೈದು ದಿನಗಳೋ ಬಾಕಿ ಇರುವಾಗ ವಿದ್ಯಾರ್ಥಿಗಳಿಗೆ ‘ಪರೀಕ್ಷಾ ತರಬೇತಿ’ ಎನ್ನುವ ಕಾರ್ಯಾಗಾರಗಳು ಪ್ರತಿ