ಗಾಂಧಿ ವಿಚಾರ ವೇದಿಕೆಗೆ ತಮಗೆ ಸ್ವಾಗತ.
ಗಾಂಧಿ ವಿಚಾರ ವೇದಿಕೆಯ ಬ್ಲಾಗ್ , ಲೇಖನಗಳು , ವರದಿಗಳು , ಐತಿಹಾಸಿಕ ಸತ್ಯಾಂಶಗಳು ಮತ್ತು ಸಂಭಂದಿತ ವೀಡಿಯೋಗಳನ್ನು ಇಲ್ಲಿ ಪ್ರಸ್ತುತಪಡಿಸಿದೆ.
ಗಾಂಧಿ ವಿಚಾರ ವೇದಿಕೆ: ಪರಿಚಯ
- – ಅರವಿಂದ ಚೊಕ್ಕಾಡಿ
ಸಾಮಾನ್ಯವಾಗಿ ಸಮಾಜ ಸೇವೆಯ ಕಾರ್ಯಕ್ರಮಗಳು ಭೌತಿಕ ರೂಪದ ಸೌಲಭ್ಯಗಳನ್ನು ಅಗತ್ಯವಿರುವವರಿಗೆ ಒದಗಿಸುವ ರೀತಿಯದ್ದಾಗಿದ್ದು ಈ ಕೆಲಸವನ್ನು ಸಾಕಷ್ಟು ಸಂಘಟನೆಗಳು ಮಾಡುತ್ತಿವೆ. ಆದರೆ ಸಮಾಜಕ್ಕೆ ಬೌದ್ಧಿಕ ಸೇವೆಯ ಅಗತ್ಯವೂ ಇದ್ದು ಮನುಷ್ಯರು ಮಾನವ ಸಂಪನ್ಮೂಲವಾಗಿ ಬೆಳೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ಹುಟ್ಟಿಕೊಂಡಿರುವುದೇ ಗಾಂಧಿ ವಿಚಾರ ವೇದಿಕೆ.
ವೇದಿಕೆಯ ಕೇಂದ್ರ ಕಛೇರಿಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ‘ವಿದ್ಯಾಮಾತಾ ಅಕಾಡೆಮಿ’ ಯಲ್ಲಿದೆ. ಇದು ಟ್ರಸ್ಟ್ ಕಾಯ್ದೆಯ ಅನುಸಾರವಾಗಿ 11 ನವಂಬರ್ 2021 ರಂದು ನೋಂದಾವಣೆಗೊಂಡಿದ್ದು ಐದು ಮಂದಿ ಟ್ರಸ್ಟಿಗಳನ್ನು ಸ್ಥಾಪಕ ಸದಸ್ಯರಾಗಿ ಹೊಂದಿದೆ. ಈ ಟ್ರಸ್ಟ್ ವೇದಿಕೆಯ ಎಲ್ಲ ರೀತಿಯ ಕಾರ್ಯಗಳನ್ನು ನಿರ್ವಹಿಸುವ ಕೇಂದ್ರ ಸಮಿತಿಯಾಗಿ ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯನ್ನು ಸೃಷ್ಟಿಸಿದೆ. ಮಾತೃ ಸಮಿತಿಯ ಅಧೀನದಲ್ಲಿ ಗಾಂಧಿ ವಿಚಾರ ವೇದಿಕೆಯ ಘಟಕಗಳು ಕಾರ್ಯ ನಿರ್ವಹಿಸುತ್ತವೆ. ಮಾತೃ ಸಮಿತಿ ಮತ್ತು ಘಟಕಗಳ ಪದಾಧಿಕಾರಿಗಳು ಐದು ವರ್ಷಗಳ ವರೆಗೆ ಅಧಿಕಾರದಲ್ಲಿರುತ್ತಾರೆ. ನಂತರ ಸರ್ವಾನುಮತದಿಂದ ಮುಂದಿನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಅನಿವಾರ್ಯವಾದಲ್ಲಿ ಚುನಾವಣೆಯನ್ನೂ ನಡೆಸಬಹುದು. ಆದರೆ ಪದಾಧಿಕಾರಿಗಳ ಆಯ್ಕೆಯು ಟ್ರಸ್ಟ್‌ಗೆ ತೃಪ್ತಿಕರವಾಗಿ ಕಾಣಿಸಬೇಕು. ಟ್ರಸ್ಟಿಗಳ ದೃಷ್ಟಿಯಲ್ಲಿ ಆಯ್ಕೆಯು ಅತೃಪ್ತಿಕರವಾಗಿದ್ದರೆ ಪ್ರಜಾಸತ್ತಾತ್ಮಕ ವಿಧಾನದಲ್ಲೆ ಬದಲಿ ಆಯ್ಕೆಯನ್ನು ಸೂಚಿಸಬಹುದು. ಪ್ರಸ್ತುತ ತಮ್ಮ ಅಜ್ಜನ ಕಾಲದಿಂದಲೂ ಮಹಾತ್ಮಾ ಗಾಂಧಿಯವರ ಅನುಯಾಯಿಗಳ ಪರಂಪರೆಯನ್ನು ಹೊಂದಿರುವ ಶ್ರೀಧರ ಜಿ. ಭಿಡೆ ಅವರು ಮಾತೃ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಮೂಡುಬಿದಿರೆ, ಮಂಗಳೂರು, ಕಾರ್ಕಳ, ಉಡುಪಿ, ಬ್ರಹ್ಮಾವರ, ಮೈಸೂರು, ಕಲಬುರ್ಗಿಗಳಲ್ಲಿ ಗಾಂಧಿ ವಿಚಾರ ವೇದಿಕೆಯ ಘಟಕಗಳು ಕೆಲಸ ಕಾರ್ಯಗಳನ್ನು ಮಾಡುತ್ತಿವೆ. ಭಾರತದ ಯಾವ ಭಾಗದಲ್ಲಿ ಬೇಕಾದರೂ ಇದರ ಘಟಕಗಳನ್ನು ತೆರೆಯಬಹುದು.
ಇದು ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಬದ್ಧವಲ್ಲದ, ರಾಜಕೀಯ ಉದ್ದೇಶಗಳಿಗಾಗಿ ಕೆಲಸ ಮಾಡದ ವೇದಿಕೆಯಾಗಿದ್ದು ಎಲ್ಲರನ್ನೂ ಒಳಗೊಳ್ಳುವ ಗಾಂಧೀಜಿಯವರ ಚಿಂತನೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಜನರಲ್ಲಿ ಅರಿವನ್ನು ಹೆಚ್ಚಿಸುವುದಕ್ಕಾಗಿ ಕೆಲಸ ಮಾಡುವುದೇ ವೇದಿಕೆಯ ಗುರಿಯಾಗಿದೆ. ಈ ಗುರಿಯನ್ನು ಸಾಧಿಸಲು ಗಾಂಧೀಜಿಯವರ ಚಿಂತನೆಗಳ ಆಚೆಗೂ ವೇದಿಕೆಯು ಕೆಲಸವನ್ನು ಮಾಡುತ್ತದೆ. ಅಂದರೆ ಗಾಂಧಿ ವಿಚಾರ ವೇದಿಕೆಯ ಆಶ್ರಯದಲ್ಲಿ ಅಂಬೇಡ್ಕರ್, ಲೋಹಿಯಾ, ಅರವಿಂದರು, ಜವಾಗರ ಲಾಲ್ ನೆಹರೂ, ದೀನ ದಯಾಳ್ ಉಪಾಧ್ಯಾಯ, ಜಿಡ್ಡು ಕೃಷ್ಣಮೂರ್ತಿ ಹೀಗೆ ಇತರ ಯಾರ ಚಿಂತನೆಗಳ ಕುರಿತಾಗಿಯೂ ಕೆಲಸವನ್ನು ಮಾಡಬಹುದಾಗಿದೆ. ಇನ್ನಿತರೇ ವಿಷಯಗಳ ಬಗ್ಗೆಯೂ ಕೆಲಸ ಮಾಡುತ್ತದೆ. ಅಂದರೆ ವೇದಿಕೆಯು ಗಾಂಧೀಜಿಯವರ ವಿಚಾರಕ್ಕೆ ಮಾತ್ರ ಸೀಮಿತವಾಗಿಲ್ಲ.
ಎಲ್ಲ ಧರ್ಮೀಯರು, ಎಲ್ಲ ಜಾತಿಯವರು, ಸ್ತ್ರೀ-ಪುರುಷ-ತೃತೀಯ ಲಿಂಗಿಗಳೆಲ್ಲರೂ ಪರಸ್ಪರ ಸಮ ಭಾವದಿಂದ ಅನ್ಯೋನ್ಯವಾಗಿ ಬದುಕಬೇಕು, ಜನ ಜೀವನದಲ್ಲಿ ನೈತಿಕತೆ ಮತ್ತು ಜೀವನ ಮೌಲ್ಯಗಳು ಹೆಚ್ಚಬೇಕು, ಆರ್ಥಿಕ ಗಳಿಕೆಗಾಗಿ ಪ್ರತಿಯೊಬ್ಬರಲ್ಲೂ ಏನಾದರೊಂದು ಕೌಶಲವಿರಬೇಕು, ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕು, ಸರಳ ಜೀವನ-ಉದಾತ್ತ ಚಿಂತನೆ ಸಾಧ್ಯವಾಗಬೇಕು, ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗಬೇಕು, ವ್ಯಕ್ತಿ ಸ್ವಾತಂತ್ರ್ತವನ್ನು ರಕ್ಷಿಸಬೇಕು, ದಾಸ್ಯ ಪ್ರವೃತ್ತಿ ಇರಬಾರದು, ಪರಿಸರವನ್ನು ರಕ್ಷಿಸಬೇಕು, ಪರಂಪರೆಯನ್ನು ಪೋಷಿಸಬೇಕು, ರಾಷ್ಟ್ರೀಯ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು, ಕಲೆ-ಸಾಹಿತ್ಯ-ಸಂಸ್ಕೃತಿ-ವೈಜ್ಞಾನಿಕ ದೃಷ್ಟಿಕೋನವನ್ನು ಹೆಚ್ಚಿಸಿಕೊಳ್ಳಬೇಕು, ತಾರತಮ್ಯವನ್ನು ನಿವಾರಿಸಬೇಕು ಎಂಬಿತ್ಯಾದಿ ವಿಷಯಗಳು ಗಾಂಧಿ ವಿಚಾರ ವೇದಿಕೆಯ ಆಶಯವಾಗಿದೆ. ಒಳ್ಳೆಯ ಸರಕಾರಗಳು ಒಳ್ಳೆಯ ಜನರಿಂದ ಬರುತ್ತವೆ. ಆದ್ದರಿಂದ ಜನರ ಗುಣ ಮಟ್ಟವು ಹೆಚ್ಚುವುದೇ ಮುಖ್ಯ ಎಂದು ಗಾಂಧಿ ವಿಚಾರ ವೇದಿಕೆಯು ನಂಬುತ್ತದೆ.
ಪ್ರಸ್ತುತ ಅಂಕಗಳನ್ನು ಕೇಂದ್ರೀಕರಿಸಿದ ಶಿಕ್ಷಣವು ಯಾಂತ್ರಿಕವಾಗುತ್ತಾ ಹೋಗುತ್ತಿದ್ದು ಶಿಕ್ಷಣದಲ್ಲಿ ಸಂವಾದದ ಕೊರತೆ ಉಂಟಾಗಿದೆ. ಸಾಮಾಜಿಕ ಜೀವನದಲ್ಲಿಯೂ ತಾನೇ ಗೆಲ್ಲಬೇಕೆಂದು ಮಾಡುವ ಅರ್ಥಹೀನ ವಾದಗಳೇ ಸಂವಾದಗಳೆನಿಸಿವೆ. ವಿಚಾರ ಗೋಷ್ಠಿಗಳು ಹೆಚ್ಚು ಜನರನ್ನು ಸೇರಿಸಿ ಮಾಡುವ ಏಕ ಮುಖಿ ಭಾಷಣಗಳಾಗಿದ್ದು ವಿಚಾರಗಳು ಯಾರನ್ನೂ ತಲುಪುವುದಿಲ್ಲ. ಇಂತಹ ಸಂದರ್ಭದಲ್ಲಿ ಇನ್ನೊಬ್ಬರ ಮಾತನ್ನೂ ಆಲಿಸುವ ಪ್ರವೃತ್ತಿಯನ್ನು ಬೆಳೆಯಿಸುವ, ವಿಚಾರವನ್ನು ಎಲ್ಲರೂ ಕೇಳಿಸಿಕೊಳ್ಳುವ 10-40 ಜನರ ಒಳಗೆ ಇರುವ ಸಣ್ಣ ಸಣ್ಣ ತಂಡಗಳಲ್ಲಿ ಮುಕ್ತ ಸಂವಾದವನ್ನು ವೇದಿಕೆಯು ನಡೆಸುತ್ತಿದೆ. ಈ ರೀತಿಯ ಸಾಕಷ್ಟು ‘ ಮನೆ ಸಂವಾದ’ ಗಳನ್ನು ವೇದಿಕೆಯು ನಡೆಸಿದೆ. ಒಂದು ಗ್ರಾಮ ಸಂವಾದವನ್ನು ನಡೆಸಿದೆ. ವೇದಿಕೆಯ ಅಸ್ತಿತ್ವವನ್ನು ಎಲ್ಲರ ಗಮನಕ್ಕೂ ತರಬೇಕಾಗಿದ್ದಾಗ ಆ ಉದ್ದೇಶಕ್ಕಾಗಿ ಮಾತ್ರ ಬೃಹತ್ ಸಮ್ಮೇಳನಗಳನ್ನು ನಡೆಸಲು ಅವಕಾಶವಿದೆ. ಈ ಸಂವಾದಗಳು ಆರ್ಥಿಕ ಸ್ವಾವಲಂಬನೆ, ಜೀವನ ಮೌಲ್ಯಗಳು, ಪರಸ್ಪರ ಸದ್ಭಾವನೆ, ಜಿಜ್ಞಾಸು ಪ್ರವೃತ್ತಿ ಮುಂತಾದವಕ್ಕೆ ಸಂಬಂಧಿಸಿರುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆ ಇಲ್ಲದೆ ನೇರವಾಗಿ ಒಬ್ಬರ ಮನೆಗೆ ಹಲವರು ಹೋಗಿ ನಡೆಸುವ ಸಂವಾದಗಳು ಮನುಷ್ಯ ಸಂಬಂಧಗಳನ್ನು ಅಭಿವೃದ್ಧಿಪಡಿಸುತ್ತವೆ. ಇಡೀ ಕುಟುಂಬವನ್ನೆ ವೈಚಾರಿಕವಾಗಿ ಉನ್ನತೀಕರಿಸುತ್ತದೆ. ವಿಚಾರವನ್ನು ಸಮರ್ಪಕವಾಗಿ ಹೇಳುವ ವಿಧಾನವನ್ನು ಕಲಿಸುತ್ತದೆ. ಮುಂದಿನ ದಿನಗಳಲ್ಲಿ ಗಾಂಧಿ ವನದ ನಿರ್ಮಾಣ, ಆ ವನದ ಉತ್ಪನ್ನಗಳಿಂದ ಸ್ಥಳೀಯ ಉತ್ಪಾದನೆಗಳನ್ನು ಮಾಡಿ ಮಾರಾಟ ಮಾಡುವುದು, ದೇಶೀಯ ಆರ್ಥಿಕ ಘಟಕಗಳ ಉತ್ಪಾದನಾ ಕೌಶಲವನ್ನು ಕಲಿಸುವುದು, ಅನುಕೂಲವಾದರೆ ರಾಜ್ಯದ ನಾನಾ ಭಾಗಗಳಿಂದ ಪದವಿ ಮುಗಿಸಿದ ವಿದ್ಯಾರ್ಥಿಗಳನ್ನು ಅಸಹ್ವಾನಿಸಿ ಉದ್ಯೋಗ ಶಿಕ್ಷಣವನ್ನು ನೀಡುವುದರೊಂದಿಗೆ, ಗಾಂಧಿ ತತ್ವಗಳು ಮತ್ತು ವೇದಿಕೆಯ ಆಶಯವನ್ನು ಅವರಲ್ಲಿ ಬೆಳೆಯಿಸುವ ಯೋಜನೆಗಳಿವೆ.
ಪ್ರಸ್ತುತ ಮೂರು ಮುಖ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗಾಂಧೀಜಿಯವರ ಕುರಿತಾಗಿ ಇರುವ ಅನೇಕ ಪ್ರಶ್ನೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಿ ಅವುಗಳಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳು ಕೊಟ್ಟ ಉತ್ತರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನರಿಗೆ ತಲುಪಿಸುವುದು. ಎರಡನೆಯದು ವೇದಿಕೆಯ ಸದಸ್ಯರ ಚಿಂತನಾ ಸಾಮರ್ಥ್ಯದ ಹೆಚ್ಚಳಕ್ಕಾಗಿ ರೂಪಿಸಿದ ಯೋಜನೆಯಾಗಿದೆ. ಸದಸ್ಯರಿಗೆ ಇದರಲ್ಲಿ ಆದ್ಯತೆ ಇದ್ದು ಅವರು ಗಾಂಧೀಜಿಗೆ ಮತ್ತು ವೇದಿಕೆಯ ಆಶಯಕ್ಕೆ ತಕ್ಕಂತೆ ಬರೆದ ಲೇಖನಗಳ ಸಂಕಲನವನ್ನು ಪ್ರಕಟಿಸಲಾಗುತ್ತದೆ. ಮುಂದೆ ಇವರು ಸಮರ್ಥ ಲೇಖಕರಾಗಿ ಬೆಳೆಯಬೇಕೆಂಬುದು ವೇದಿಕೆಯ ಆಶಯವಾಗಿದೆ. ಮೂರನೆಯದು ವೇದಿಕೆಯ ಸದಸ್ಯರಾದ ಛಾಯಾ ಉಪಾಧ್ಯಾಯ ಅವರು ಸಂಗ್ರಹಿಸಿರುವ, ಗಾಂಧೀಜಿಯವರು ಅವರ ಕಾಲದ ಯುವ ಜನತೆಯ ಪ್ರಶ್ನೆಗಳಿಗೆ ಕೊಟ್ಟಿರುವ ಉತ್ತರವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿದೆ.
ಸದ್ಯ ವೇದಿಕೆಯ ಕೆಲಸ ಕಾರ್ಯಗಳು ಹೀಗಿದ್ದರೂ ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ವಿಸ್ತರಿಸಲು ಅವಕಾಶವಿದೆ. ವೇದಿಕೆಯ ಘಟಕವನ್ನು ತಮ್ಮ ತಾಲೂಕಿನಲ್ಲಿ ತೆರೆಯಲು ಬಯಸಿದವರು ಚಂದ್ರಣ್ಣ ಎನ್. ಎಸ್, ಕ್ಯಾತನಹಳ್ಳಿ, ಮಂಡ್ಯ (ದಕ್ಷಿಣ ಕರ್ನಾಟಕ ಸಂಯೋಜಕರು-9741320777), ನೇತಾಜಿ ಗಾಂಧಿ, ವಿಜಾಪುರ(ಉತ್ತರ ಕರ್ನಾಟಕ ಸಂಯೋಜಕರು-9380569849), ಮುಷ್ತಾಕ್ ಹೆನ್ನಾಬೈಲ್, ಸಿದ್ಧಾಪುರ (ಮಧ್ಯ ಕರ್ನಾಟಕ ಸಂಯೋಜಕರು-9448027773), ಕಾಂಚೋಡು ಗೋಪಾಲಕೃಷ್ಣ (ಸಮನ್ವಯಕಾರರು-9980249568), ಭಾಗ್ಯೇಶ್ ರೈ(ಆಡಳಿತಾಧಿಕಾರಿ-9620468869), ಅರವಿಂದ ಚೊಕ್ಕಾಡಿ (ಪ್ರಧಾನ ಕಾರ್ಯದರ್ಶಿ-9740688698) ಇವರಲ್ಲಿ ಯಾರನ್ನಾದರೂ ಸಂಪರ್ಕಿಸಬಹುದು.
—————————————————-
ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ – ಅರವಿಂದ ಚೊಕ್ಕಾಡಿ
13-March-2023 ಯಾವುದೇ ಕಾಲದ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂಬ ಆಶಯವನ್ನು ಹೊಂದಿರುತ್ತದೆ. 2020ರ ಶಿಕ್ಷಣ ನೀತಿಯಲ್ಲಿಯೂ ಈ ಅಂಶವು ಪ್ರಸ್ತಾಪಿಸಲ್ಪಟ್ಟಿದೆ. ಆದರೆ, ವಾಸ್ತವದಲ್ಲಿ ಮೌಲ್ಯ ಶಿಕ್ಷಣದಷ್ಟು ಜಟಿಲವಾದ ಪಠ್ಯ ಅಂಶ ಇನ್ನೊಂದು ಇಲ್ಲ. ಏಕೆಂದರೆ ಕಲಿಕೆಯ ಮೇಲೆ ಪರಿಸರವು ಅಪಾರ ಪ್ರಭಾವವನ್ನು ಹೊಂದಿರುತ್ತದೆ. ಮಕ್ಕಳ ಕಲಿಕಾ ಪರಿಸರವಾದ ಸಮಾಜದಲ್ಲಿ ನೈತಿಕ ಮೌಲ್ಯಗಳು
26/2/2023 ಗಾಂಧಿ ವಿಚಾರ ವೇದಿಕೆ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಮಂಗಳೂರು ಜಂಟಿ ಆಶ್ರಯದಲ್ಲಿ ‘ಜನ ಸಂವಾದ’
ಮಹಾತ್ಮ ಗಾಂಧಿಯವರ ವಿಚಾರವನ್ನು ಮತ್ತೆ ಅರ್ಥೈಸಿಕೊಂಡು ಸಮಾಜದ ಭಾವನೆಯನ್ನು ಬದಲಾಯಿಸುವ ಪ್ರಯತ್ನವಾಗಬೇಕು..- ಸಂತೋಷ್ ಹೆಗ್ಡೆ
ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ.
ಎಪ್ರಿಲ್ 2 – 2023 : ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ ಮೂಡುಬಿದಿರೆ, ಎ.೨: ಮಾಡುವ ಕಾರ್ಯ ಆಡುವ ನುಡಿಯಲ್ಲಿ ತಾದ್ಯಾತ್ಮ ಭಾವ ಹೊಂದಿರುವ ಅಪರೂಪದ ಬೌದ್ಧಿಕ ಕ್ರಾಂತಿಕಾರಿ, ಪ್ರಬುದ್ಧ ಚಿಂತಕ ಅರವಿಂದ ಚೊಕ್ಕಾಡಿ ಅವರ ಜೀವನ ಕ್ರಮ ಹಾಡುತ್ತ ನೇಜಿ ನೆಡುವಂತೆ, ಮೊಸರು ಕಡೆಯುವಂತೆ ಇದೆ. ಈ
ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕದ ಉದ್ಘಾಟನೆ.
ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕದ ಉದ್ಘಾಟನೆ.
ಎಲ್ಲರ ಗಾಂಧೀಜಿ – ಸಂವಾದ, ಜಿಲ್ಲಾ ಘಟಕ ಕಲಬುರಗಿ
30-01-2023 ರಂದು ಕಲಬುರಗಿ ಘಟಕದ ವತಿಯಿಂದ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ
ಗಾಂಧಿ ಪ್ರಿಯರೇ, ನಮ್ಮ ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕದ ವತಿಯಿಂದ ದಿನಾಂಕ: 30.01.2023 ರಂದು ಸಂಜೆ 5.30ಕ್ಕೆ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವಿವರಗಳು: ದಿನಾಂಕ: 30.01.2023, ಸೋಮವಾರಸಮಯ: ಸಂಜೆ: 5.30ರಿಂದ 6.30ರವರೆಗೆಸ್ಥಳ: ಆಪ್ತರಂಗ(ರಿ), ಕುಸನೂರು ರಸ್ತೆ, ಕಲಬುರಗಿ ಅಧ್ಯಕ್ಷತೆ: ಶ್ರೀ ಶಂಕ್ರಯ್ಯ ಆರ್ ಘಂಟಿಮಿನುಗು ನೋಟ ಪುಸ್ತಕದ ಕುರಿತು ಮಾತುಕತೆ: ಶ್ರೀ
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು?
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು? `ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ…`- ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ
ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು
31- 1- 2023 ರಂದು ಶಿವಮೊಗ್ಗದ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸ ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು ಈ ಸಭೆಯ ಅಧ್ಯಕ್ಷರೇ ಮತ್ತು ಎಲ್ಲ ಸ್ನೇಹಿತರೇ. ನಾನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ. ಈಗ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿಗೆ ಬಂದಿದ್ದೇನೆ. ಇದೊಂಥರಾ ಚೆನ್ನಾಗಿದೆ. ನೆಹರೂ ಮೆಮೋರಿಯಲ್ ಕಾಲೇಜಿನ
ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ
ಮುಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಠಾನದವರು ನಡೆಸಿದ ಕಾರ್ಯಕ್ರಮದಲ್ಲಿ ಮಾಡಿದ ಉಪನ್ಯಾಸ. [ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ] – ಅರವಿಂದ ಚೊಕ್ಕಾಡಿ. ಈ ಸಭೆಯ ಅಧ್ಯಕ್ಷರೆ ಮತ್ತು ಎಲ್ಲ ಸ್ನೇಹಿತರೆ, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ ಎಂಬ ವಿಚಾರದಲ್ಲಿ ಪ್ರಜಾಪ್ರಭುತ್ವ ಎಂದರೇನು ಮತ್ತು ಗಾಂಧಿ ಮಾರ್ಗ ಎಂದರೇನು ಎನ್ನುವುದು ಬಹಳ ಮುಖ್ಯ ವಿಚಾರಗಳಾಗಿವೆ. ನಿಜವಾದ
ಮಿನುಗು ನೋಟ – ಗಾಂಧೀಜಿ ಕುರಿತ [ಪ್ರಶ್ನೆ – ಉತ್ತರ] ಪುಸ್ತಕ ಅನಾವರಣ.
– 15 ಜನವರಿ 2023 : ಎಂ. ಜಿ. ಹೆಗಡೆಯವರ ‘ ಮಿನುಗು ನೋಟ’ ಕೃತಿಯನ್ನು ಬಿಡುಗಡೆ ಮಾಡಿದ ನಂತರ ಸುಧೀಂದ್ರ ಕುಲಕರ್ಣಿ ಅವರು ಗಾಂಧಿ ವಿಚಾರ ವೇದಿಕೆಯಲ್ಲಿ ಆಡಿದ ಮಾತುಗಳು. ವರದಿ: ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ, ಮುಸ್ಲಿಂ ವಿರೋಧಿಯಲ್ಲದ ಹಿಂದುತ್ವದ ಅಗತ್ಯವಿದೆ: ಸುಧೀಂದ್ರ ಕುಲಕರ್ಣಿ ಮಂಗಳೂರು, ಜ. 15: ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ, ಮುಸ್ಲಿಂ
3- 11- 2022 ಉಡುಪಿ ‘ಅಟಾರ್ನಿ ಗಾಂಧಿ’ ಪುಸ್ತಕ ಬಿಡುಗಡೆಯಲ್ಲಿ ಆಡಿದ ಮಾತುಗಳು – ಅರವಿಂದ ಚೊಕ್ಕಾಡಿ
3- 11- 2022 ರಂದು ಉಡುಪಿಯಲ್ಲಿ ನಡೆದ ‘ಅಟಾರ್ನಿ ಗಾಂಧಿ’ ಪುಸ್ತಕ ಬಿಡುಗಡೆಯಲ್ಲಿ ಆಡಿದ ಮಾತುಗಳು ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಿತ್ರ ಓ. ಆರ್. ಪ್ರಕಾಶ್ ಅವರು ಬರೆದಿರುವ ‘ ಅಟಾರ್ನಿ ಗಾಂಧಿ’ ಪುಸ್ತಕವು ಮಹಾತ್ಮಾ ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಜೀವನದ ವಿಸ್ತಾರವಾದ ವಿವರಗಳನ್ನು ಹೊಂದಿದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಿನ
Puttur-14-11-2022 ಜವಾಹರ ಲಾಲ್ ನೆಹರೂ ಬಗ್ಗೆ ಅರವಿಂದ ಚೊಕ್ಕಾಡಿ-ಯವರಿಂದ ಪ್ರಧಾನ ಉಪನ್ಯಾಸ.
ನೆಹರೂ ವಿಚಾರ ವೇದಿಕೆ ಪುತ್ತೂರು ಇವರು 14/11/2022 ರಂದು ನಡೆಸಿದ ಕಾರ್ಯಕ್ರಮದಲ್ಲಿ ‘ಜವಾಹರ ಲಾಲ್ ನೆಹರೂ: ನವ ಭಾರತದ ದೃಷ್ಟಿಕೋನ’ ದ ಬಗ್ಗೆ ಮಾಡಿದ ಪ್ರಧಾನ ಉಪನ್ಯಾಸ: By: Aravinda Chokkadi ಮಾನ್ಯರೆ, ಇವತ್ತು ಮಕ್ಕಳ ದಿನಾಚರಣೆಯೂ ಹೌದಾಗಿರುವುದರಿಂದ, ಜವಾಹರ ಲಾಲ್ ನೆಹರೂ ಅವರು 1949 ರಲ್ಲಿ ಮಕ್ಕಳಿಗೆ ಬರೆದ ಪತ್ರದ ವಿಷಯವನ್ನು ಆಧರಿಸಿ ಐದು
ಮಿನುಗು-ನೋಟ ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.
ಪುಸ್ತಕ ಅನಾವರಣಗೊಂಡ ನಂತರದ ವರದಿಗಳು ಈ ಲಿಂಕ್ ನಲ್ಲಿವೆ : https://gvv.info/events/2023/minugu-nota-2023/ಹಿಂದಿನ ಮಾಹಿತಿ ಈ ಸಾಲಿನ ಕೆಳಗಡೆ ಇದೆ. ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆ ಮತ್ತು ಪ್ರಸ್ತುತಿ. ಮಾನ್ಯರೆ, ನಮಸ್ತೆ. ನಾನು ಅರವಿಂದ ಚೊಕ್ಕಾಡಿ. (04-Dec-2022) ನಮ್ಮ ಗಾಂಧಿ ವಿಚಾರ ವೇದಿಕೆಯಿಂದ ‘ ಮಿನುಗು ನೋಟ: ಗಾಂಧಿ ಪ್ರಶ್ನೆ- ಉತ್ತರ’ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ. ಗಾಂಧೀಜಿಯ ಕುರಿತಾದ
ಉಡುಪಿಯಲ್ಲಿ ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ – Report
03-10-2022 : ಹಾಜಿ ಅಬ್ದುಲ್ಲ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ವತಿಯಿಂದ ಇವತ್ತು ಉಡುಪಿಯಲ್ಲಿ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ ನಡೆಯಿತು. ‘ ಕೋಮು ಸೌಹಾರ್ದತೆ’ ಎಂಬ ವಿಷಯದಲ್ಲಿ ಸಾಮಾನ್ಯವಾಗಿ ನಾನು ಮಾತನಾಡಲು ಒಪ್ಪುವುದಿಲ್ಲ. ಏಕೆಂದರೆ‘ ಕೋಮು ಸೌಹಾರ್ದತೆ’ ಯ ಹೆಸರಿನಲ್ಲಿ ಮಾತಾಡಿದವರೆಲ್ಲ ಹಿಂದೂಗಳಿಗೆ ಕ್ರೂರವಾಗಿ ಬೈದು, ಕೆಟ್ಟದಾಗಿ ಅವಮಾನಿಸಿ
Puttur ಗಾಂಧಿ ಚಿಂತನ ಕಾರ್ಯಕ್ರಮ GVV
ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದವರು 02 – 10 – 2022 ರಂದು ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗಾಂಧಿ ಚಿಂತನ ಕಾರ್ಯಕ್ರಮ ನಡೆಸಿದರು.
ಸದ್ಭಾವನಾ ಜಾಥಾ
#ಗಾಂಧಿವಿಚಾರವೇದಿಕೆ ನಿನ್ನೆ 02-10-2022 ರಂದು ಸುಳ್ಯದಲ್ಲಿ ಹರೀಶ್ ಬಂಟ್ವಾಳ್ ಅವರ ನೇತೃತ್ವದ ಗಾಂಧಿ ಚಿಂತನ ವೇದಿಕೆಯವರೊಂದಿಗೆ ಸೇರಿ ಗಾಂಧಿ ವಿಚಾರ ವೇದಿಕೆಯ ಶ್ರೀ ಅಣ್ಣಾ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರ ಗೌಡ, ಡಾ. ಪೂವಪ್ಪ ಕಣಿಯೂರು, ಶ್ರೀ ಅಚ್ಚುತ ಮಲ್ಕಜೆ, ಶ್ರೀ ಲಕ್ಷ್ಮೀಶ ಗಬ್ಲಡ್ಕ ಅವರು ಸದ್ಭಾವನಾ ಜಾಥದಲ್ಲಿ ಪಾಲ್ಗೊಂಡರು.