ಗಾಂಧಿ ವಿಚಾರ ವೇದಿಕೆಗೆ ತಮಗೆ ಸ್ವಾಗತ.

ಗಾಂಧಿ ವಿಚಾರ ವೇದಿಕೆಯ ಬ್ಲಾಗ್ , ಲೇಖನಗಳು , ವರದಿಗಳು , ಐತಿಹಾಸಿಕ ಸತ್ಯಾಂಶಗಳು ಮತ್ತು ಸಂಭಂದಿತ ವೀಡಿಯೋಗಳನ್ನು ಇಲ್ಲಿ ಪ್ರಸ್ತುತಪಡಿಸಿದೆ.


ಗಾಂಧಿ ವಿಚಾರ ವೇದಿಕೆ: ಪರಿಚಯ

  • ಅರವಿಂದ ಚೊಕ್ಕಾಡಿ

ಸಾಮಾನ್ಯವಾಗಿ ಸಮಾಜ ಸೇವೆಯ ಕಾರ್ಯಕ್ರಮಗಳು ಭೌತಿಕ ರೂಪದ ಸೌಲಭ್ಯಗಳನ್ನು ಅಗತ್ಯವಿರುವವರಿಗೆ ಒದಗಿಸುವ ರೀತಿಯದ್ದಾಗಿದ್ದು ಈ ಕೆಲಸವನ್ನು ಸಾಕಷ್ಟು ಸಂಘಟನೆಗಳು ಮಾಡುತ್ತಿವೆ. ಆದರೆ ಸಮಾಜಕ್ಕೆ ಬೌದ್ಧಿಕ ಸೇವೆಯ ಅಗತ್ಯವೂ ಇದ್ದು ಮನುಷ್ಯರು ಮಾನವ ಸಂಪನ್ಮೂಲವಾಗಿ ಬೆಳೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ಹುಟ್ಟಿಕೊಂಡಿರುವುದೇ ಗಾಂಧಿ ವಿಚಾರ ವೇದಿಕೆ.

ವೇದಿಕೆಯ ಕೇಂದ್ರ ಕಛೇರಿಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ‘ವಿದ್ಯಾಮಾತಾ ಅಕಾಡೆಮಿ’ ಯಲ್ಲಿದೆ. ಇದು ಟ್ರಸ್ಟ್ ಕಾಯ್ದೆಯ ಅನುಸಾರವಾಗಿ 11 ನವಂಬರ್ 2021 ರಂದು ನೋಂದಾವಣೆಗೊಂಡಿದ್ದು ಐದು ಮಂದಿ ಟ್ರಸ್ಟಿಗಳನ್ನು ಸ್ಥಾಪಕ ಸದಸ್ಯರಾಗಿ ಹೊಂದಿದೆ. ಈ ಟ್ರಸ್ಟ್ ವೇದಿಕೆಯ ಎಲ್ಲ ರೀತಿಯ ಕಾರ್ಯಗಳನ್ನು ನಿರ್ವಹಿಸುವ ಕೇಂದ್ರ ಸಮಿತಿಯಾಗಿ ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯನ್ನು ಸೃಷ್ಟಿಸಿದೆ. ಮಾತೃ ಸಮಿತಿಯ ಅಧೀನದಲ್ಲಿ ಗಾಂಧಿ ವಿಚಾರ ವೇದಿಕೆಯ ಘಟಕಗಳು ಕಾರ್ಯ ನಿರ್ವಹಿಸುತ್ತವೆ. ಮಾತೃ ಸಮಿತಿ ಮತ್ತು ಘಟಕಗಳ ಪದಾಧಿಕಾರಿಗಳು ಐದು ವರ್ಷಗಳ ವರೆಗೆ ಅಧಿಕಾರದಲ್ಲಿರುತ್ತಾರೆ. ನಂತರ ಸರ್ವಾನುಮತದಿಂದ ಮುಂದಿನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಅನಿವಾರ್ಯವಾದಲ್ಲಿ ಚುನಾವಣೆಯನ್ನೂ ನಡೆಸಬಹುದು. ಆದರೆ ಪದಾಧಿಕಾರಿಗಳ ಆಯ್ಕೆಯು ಟ್ರಸ್ಟ್‌ಗೆ ತೃಪ್ತಿಕರವಾಗಿ ಕಾಣಿಸಬೇಕು. ಟ್ರಸ್ಟಿಗಳ ದೃಷ್ಟಿಯಲ್ಲಿ ಆಯ್ಕೆಯು ಅತೃಪ್ತಿಕರವಾಗಿದ್ದರೆ ಪ್ರಜಾಸತ್ತಾತ್ಮಕ ವಿಧಾನದಲ್ಲೆ ಬದಲಿ ಆಯ್ಕೆಯನ್ನು ಸೂಚಿಸಬಹುದು. ಪ್ರಸ್ತುತ ತಮ್ಮ ಅಜ್ಜನ ಕಾಲದಿಂದಲೂ ಮಹಾತ್ಮಾ ಗಾಂಧಿಯವರ ಅನುಯಾಯಿಗಳ ಪರಂಪರೆಯನ್ನು ಹೊಂದಿರುವ ಶ್ರೀಧರ ಜಿ. ಭಿಡೆ ಅವರು ಮಾತೃ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ಮೂಡುಬಿದಿರೆ, ಮಂಗಳೂರು, ಕಾರ್ಕಳ, ಉಡುಪಿ, ಬ್ರಹ್ಮಾವರ, ಮೈಸೂರು, ಕಲಬುರ್ಗಿಗಳಲ್ಲಿ ಗಾಂಧಿ ವಿಚಾರ ವೇದಿಕೆಯ ಘಟಕಗಳು ಕೆಲಸ ಕಾರ್ಯಗಳನ್ನು ಮಾಡುತ್ತಿವೆ. ಭಾರತದ ಯಾವ ಭಾಗದಲ್ಲಿ ಬೇಕಾದರೂ ಇದರ ಘಟಕಗಳನ್ನು ತೆರೆಯಬಹುದು.

ಇದು ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಬದ್ಧವಲ್ಲದ, ರಾಜಕೀಯ ಉದ್ದೇಶಗಳಿಗಾಗಿ ಕೆಲಸ ಮಾಡದ ವೇದಿಕೆಯಾಗಿದ್ದು ಎಲ್ಲರನ್ನೂ ಒಳಗೊಳ್ಳುವ ಗಾಂಧೀಜಿಯವರ ಚಿಂತನೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಜನರಲ್ಲಿ ಅರಿವನ್ನು ಹೆಚ್ಚಿಸುವುದಕ್ಕಾಗಿ ಕೆಲಸ ಮಾಡುವುದೇ ವೇದಿಕೆಯ ಗುರಿಯಾಗಿದೆ. ಈ ಗುರಿಯನ್ನು ಸಾಧಿಸಲು ಗಾಂಧೀಜಿಯವರ ಚಿಂತನೆಗಳ ಆಚೆಗೂ ವೇದಿಕೆಯು ಕೆಲಸವನ್ನು ಮಾಡುತ್ತದೆ. ಅಂದರೆ ಗಾಂಧಿ ವಿಚಾರ ವೇದಿಕೆಯ ಆಶ್ರಯದಲ್ಲಿ ಅಂಬೇಡ್ಕರ್, ಲೋಹಿಯಾ, ಅರವಿಂದರು, ಜವಾಗರ ಲಾಲ್ ನೆಹರೂ, ದೀನ ದಯಾಳ್ ಉಪಾಧ್ಯಾಯ, ಜಿಡ್ಡು ಕೃಷ್ಣಮೂರ್ತಿ ಹೀಗೆ ಇತರ ಯಾರ ಚಿಂತನೆಗಳ ಕುರಿತಾಗಿಯೂ ಕೆಲಸವನ್ನು ಮಾಡಬಹುದಾಗಿದೆ. ಇನ್ನಿತರೇ ವಿಷಯಗಳ ಬಗ್ಗೆಯೂ ಕೆಲಸ ಮಾಡುತ್ತದೆ. ಅಂದರೆ ವೇದಿಕೆಯು ಗಾಂಧೀಜಿಯವರ ವಿಚಾರಕ್ಕೆ ಮಾತ್ರ ಸೀಮಿತವಾಗಿಲ್ಲ.

ಎಲ್ಲ ಧರ್ಮೀಯರು, ಎಲ್ಲ ಜಾತಿಯವರು, ಸ್ತ್ರೀ-ಪುರುಷ-ತೃತೀಯ ಲಿಂಗಿಗಳೆಲ್ಲರೂ ಪರಸ್ಪರ ಸಮ ಭಾವದಿಂದ ಅನ್ಯೋನ್ಯವಾಗಿ ಬದುಕಬೇಕು, ಜನ ಜೀವನದಲ್ಲಿ ನೈತಿಕತೆ ಮತ್ತು‌ ಜೀವನ ಮೌಲ್ಯಗಳು ಹೆಚ್ಚಬೇಕು, ಆರ್ಥಿಕ ಗಳಿಕೆಗಾಗಿ ಪ್ರತಿಯೊಬ್ಬರಲ್ಲೂ ಏನಾದರೊಂದು ಕೌಶಲವಿರಬೇಕು, ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕು, ಸರಳ ಜೀವನ-ಉದಾತ್ತ ಚಿಂತನೆ ಸಾಧ್ಯವಾಗಬೇಕು, ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗಬೇಕು, ವ್ಯಕ್ತಿ ಸ್ವಾತಂತ್ರ್ತವನ್ನು ರಕ್ಷಿಸಬೇಕು, ದಾಸ್ಯ ಪ್ರವೃತ್ತಿ ಇರಬಾರದು, ಪರಿಸರವನ್ನು ರಕ್ಷಿಸಬೇಕು, ಪರಂಪರೆಯನ್ನು ಪೋಷಿಸಬೇಕು, ರಾಷ್ಟ್ರೀಯ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು, ಕಲೆ-ಸಾಹಿತ್ಯ-ಸಂಸ್ಕೃತಿ-ವೈಜ್ಞಾನಿಕ ದೃಷ್ಟಿಕೋನವನ್ನು ಹೆಚ್ಚಿಸಿಕೊಳ್ಳಬೇಕು, ತಾರತಮ್ಯವನ್ನು ನಿವಾರಿಸಬೇಕು ಎಂಬಿತ್ಯಾದಿ ವಿಷಯಗಳು ಗಾಂಧಿ ವಿಚಾರ ವೇದಿಕೆಯ ಆಶಯವಾಗಿದೆ. ಒಳ್ಳೆಯ ಸರಕಾರಗಳು ಒಳ್ಳೆಯ ಜನರಿಂದ ಬರುತ್ತವೆ. ಆದ್ದರಿಂದ ಜನರ ಗುಣ ಮಟ್ಟವು ಹೆಚ್ಚುವುದೇ ಮುಖ್ಯ ಎಂದು ಗಾಂಧಿ ವಿಚಾರ ವೇದಿಕೆಯು ನಂಬುತ್ತದೆ.

ಪ್ರಸ್ತುತ ಅಂಕಗಳನ್ನು ಕೇಂದ್ರೀಕರಿಸಿದ ಶಿಕ್ಷಣವು ಯಾಂತ್ರಿಕವಾಗುತ್ತಾ ಹೋಗುತ್ತಿದ್ದು ಶಿಕ್ಷಣದಲ್ಲಿ ಸಂವಾದದ ಕೊರತೆ ಉಂಟಾಗಿದೆ. ಸಾಮಾಜಿಕ ಜೀವನದಲ್ಲಿಯೂ ತಾನೇ ಗೆಲ್ಲಬೇಕೆಂದು ಮಾಡುವ ಅರ್ಥಹೀನ ವಾದಗಳೇ ಸಂವಾದಗಳೆನಿಸಿವೆ. ವಿಚಾರ ಗೋಷ್ಠಿಗಳು ಹೆಚ್ಚು ಜನರನ್ನು ಸೇರಿಸಿ ಮಾಡುವ ಏಕ ಮುಖಿ ಭಾಷಣಗಳಾಗಿದ್ದು ವಿಚಾರಗಳು ಯಾರನ್ನೂ ತಲುಪುವುದಿಲ್ಲ. ಇಂತಹ ಸಂದರ್ಭದಲ್ಲಿ ಇನ್ನೊಬ್ಬರ ಮಾತನ್ನೂ ಆಲಿಸುವ ಪ್ರವೃತ್ತಿಯನ್ನು ಬೆಳೆಯಿಸುವ, ವಿಚಾರವನ್ನು ಎಲ್ಲರೂ ಕೇಳಿಸಿಕೊಳ್ಳುವ 10-40 ಜನರ ಒಳಗೆ ಇರುವ ಸಣ್ಣ ಸಣ್ಣ ತಂಡಗಳಲ್ಲಿ ಮುಕ್ತ ಸಂವಾದವನ್ನು ವೇದಿಕೆಯು ನಡೆಸುತ್ತಿದೆ. ಈ ರೀತಿಯ ಸಾಕಷ್ಟು ‘ ಮನೆ ಸಂವಾದ’ ಗಳನ್ನು ವೇದಿಕೆಯು ನಡೆಸಿದೆ. ಒಂದು ಗ್ರಾಮ ಸಂವಾದವನ್ನು ನಡೆಸಿದೆ. ವೇದಿಕೆಯ ಅಸ್ತಿತ್ವವನ್ನು ಎಲ್ಲರ ಗಮನಕ್ಕೂ ತರಬೇಕಾಗಿದ್ದಾಗ ಆ ಉದ್ದೇಶಕ್ಕಾಗಿ ಮಾತ್ರ ಬೃಹತ್ ಸಮ್ಮೇಳನಗಳನ್ನು‌ ನಡೆಸಲು ಅವಕಾಶವಿದೆ. ಈ ಸಂವಾದಗಳು ಆರ್ಥಿಕ ಸ್ವಾವಲಂಬನೆ, ಜೀವನ ಮೌಲ್ಯಗಳು, ಪರಸ್ಪರ ಸದ್ಭಾವನೆ, ಜಿಜ್ಞಾಸು ಪ್ರವೃತ್ತಿ ಮುಂತಾದವಕ್ಕೆ ಸಂಬಂಧಿಸಿರುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆ ಇಲ್ಲದೆ ನೇರವಾಗಿ ಒಬ್ಬರ ಮನೆಗೆ ಹಲವರು ಹೋಗಿ ನಡೆಸುವ ಸಂವಾದಗಳು ಮನುಷ್ಯ ಸಂಬಂಧಗಳನ್ನು ಅಭಿವೃದ್ಧಿಪಡಿಸುತ್ತವೆ. ಇಡೀ ಕುಟುಂಬವನ್ನೆ ವೈಚಾರಿಕವಾಗಿ ಉನ್ನತೀಕರಿಸುತ್ತದೆ. ವಿಚಾರವನ್ನು ಸಮರ್ಪಕವಾಗಿ ಹೇಳುವ ವಿಧಾನವನ್ನು ಕಲಿಸುತ್ತದೆ. ಮುಂದಿನ ದಿನಗಳಲ್ಲಿ ಗಾಂಧಿ ವನದ ನಿರ್ಮಾಣ, ಆ ವನದ ಉತ್ಪನ್ನಗಳಿಂದ ಸ್ಥಳೀಯ ಉತ್ಪಾದನೆಗಳನ್ನು ಮಾಡಿ ಮಾರಾಟ ಮಾಡುವುದು, ದೇಶೀಯ ಆರ್ಥಿಕ ಘಟಕಗಳ ಉತ್ಪಾದನಾ ಕೌಶಲವನ್ನು ಕಲಿಸುವುದು, ಅನುಕೂಲವಾದರೆ ರಾಜ್ಯದ ನಾನಾ ಭಾಗಗಳಿಂದ ಪದವಿ ಮುಗಿಸಿದ ವಿದ್ಯಾರ್ಥಿಗಳನ್ನು ಅಸಹ್ವಾನಿಸಿ ಉದ್ಯೋಗ ಶಿಕ್ಷಣವನ್ನು ನೀಡುವುದರೊಂದಿಗೆ, ಗಾಂಧಿ ತತ್ವಗಳು ಮತ್ತು ವೇದಿಕೆಯ ಆಶಯವನ್ನು ಅವರಲ್ಲಿ ಬೆಳೆಯಿಸುವ ಯೋಜನೆಗಳಿವೆ.

ಪ್ರಸ್ತುತ ಮೂರು ಮುಖ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗಾಂಧೀಜಿಯವರ ಕುರಿತಾಗಿ ಇರುವ ಅನೇಕ ಪ್ರಶ್ನೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಿ ಅವುಗಳಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳು ಕೊಟ್ಟ ಉತ್ತರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನರಿಗೆ ತಲುಪಿಸುವುದು.‌ ಎರಡನೆಯದು ವೇದಿಕೆಯ ಸದಸ್ಯರ ಚಿಂತನಾ ಸಾಮರ್ಥ್ಯದ ಹೆಚ್ಚಳಕ್ಕಾಗಿ ರೂಪಿಸಿದ ಯೋಜನೆಯಾಗಿದೆ. ಸದಸ್ಯರಿಗೆ ಇದರಲ್ಲಿ ಆದ್ಯತೆ ಇದ್ದು ಅವರು ಗಾಂಧೀಜಿಗೆ ಮತ್ತು ವೇದಿಕೆಯ ಆಶಯಕ್ಕೆ ತಕ್ಕಂತೆ ಬರೆದ ಲೇಖನಗಳ ಸಂಕಲನವನ್ನು ಪ್ರಕಟಿಸಲಾಗುತ್ತದೆ. ಮುಂದೆ ಇವರು ಸಮರ್ಥ ಲೇಖಕರಾಗಿ ಬೆಳೆಯಬೇಕೆಂಬುದು ವೇದಿಕೆಯ ಆಶಯವಾಗಿದೆ. ಮೂರನೆಯದು ವೇದಿಕೆಯ ಸದಸ್ಯರಾದ ಛಾಯಾ ಉಪಾಧ್ಯಾಯ ಅವರು ಸಂಗ್ರಹಿಸಿರುವ, ಗಾಂಧೀಜಿಯವರು ಅವರ ಕಾಲದ ಯುವ ಜನತೆಯ ಪ್ರಶ್ನೆಗಳಿಗೆ ಕೊಟ್ಟಿರುವ ಉತ್ತರವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿದೆ.

ಸದ್ಯ ವೇದಿಕೆಯ ಕೆಲಸ ಕಾರ್ಯಗಳು ಹೀಗಿದ್ದರೂ ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ವಿಸ್ತರಿಸಲು ಅವಕಾಶವಿದೆ. ವೇದಿಕೆಯ ಘಟಕವನ್ನು ತಮ್ಮ ತಾಲೂಕಿನಲ್ಲಿ ತೆರೆಯಲು ಬಯಸಿದವರು ಚಂದ್ರಣ್ಣ ಎನ್. ಎಸ್, ಕ್ಯಾತನಹಳ್ಳಿ, ಮಂಡ್ಯ (ದಕ್ಷಿಣ ಕರ್ನಾಟಕ ಸಂಯೋಜಕರು-9741320777), ನೇತಾಜಿ ಗಾಂಧಿ, ವಿಜಾಪುರ(ಉತ್ತರ ಕರ್ನಾಟಕ ಸಂಯೋಜಕರು-9380569849), ಮುಷ್ತಾಕ್ ಹೆನ್ನಾಬೈಲ್, ಸಿದ್ಧಾಪುರ (ಮಧ್ಯ ಕರ್ನಾಟಕ ಸಂಯೋಜಕರು-9448027773), ಕಾಂಚೋಡು ಗೋಪಾಲಕೃಷ್ಣ (ಸಮನ್ವಯಕಾರರು-9980249568), ಭಾಗ್ಯೇಶ್ ರೈ(ಆಡಳಿತಾಧಿಕಾರಿ-9620468869), ಅರವಿಂದ ಚೊಕ್ಕಾಡಿ (ಪ್ರಧಾನ ಕಾರ್ಯದರ್ಶಿ-9740688698) ಇವರಲ್ಲಿ ಯಾರನ್ನಾದರೂ ಸಂಪರ್ಕಿಸಬಹುದು.

—————————————————-

ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸೋಣವೇ?

[ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸೋಣವೇ? – 12-July-2024 ಪ್ರಜಾವಾಣಿಯಲ್ಲಿನ ಲೇಖನ]– ಅರವಿಂದ ಚೊಕ್ಕಾಡಿ ಹೊಸ ಶೈಕ್ಷಣಿಕ ವರ್ಷ ಶುರುವಾಗಿ ಒಂದು ತಿಂಗಳು ಕಳೆದಿದೆ. ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿ ಆಗುವ ಎಡವಟ್ಟುಗಳನ್ನು ಈಗಿನಿಂದಲೇ ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ‌. ನಮ್ಮ ಶಾಲಾ ವ್ಯವಸ್ಥೆಯಲ್ಲಿ, ಪರೀಕ್ಷೆಗೆ ಒಂದು ತಿಂಗಳೋ, ಹದಿನೈದು ದಿನಗಳೋ ಬಾಕಿ ಇರುವಾಗ ವಿದ್ಯಾರ್ಥಿಗಳಿಗೆ ‘ಪರೀಕ್ಷಾ ತರಬೇತಿ’ ಎನ್ನುವ ಕಾರ್ಯಾಗಾರಗಳು ಪ್ರತಿ

Posted in Articles | Leave a comment

ಉಳಿವಿನ, ತಿಳಿವಿನ – ಒಳನೋಟ.

ಡಾರ್ವಿನನ ವಿಕಾಸವಾದದ ಸಿದ್ದಾಂತವು ‘ಉಳಿವಿಗಾಗಿ ಹೋರಾಟ ಮತ್ತು ಬಲಿಷ್ಟವಾಗಿರುವವುಗಳ ಉಳಿವು’ ಎಂಬ ಅಂಶವನ್ನೊಳಗೊಂಡ ತತ್ವವನ್ನು ಪ್ರತಿಪಾದಿಸಿತ್ತು. ಈ ಸಿದ್ಧಾಂತವನ್ನು ಮಾನದಂಡವಾಗಿಟ್ಟುಕೊಂಡು ಈ ವಿಚಾರವು ಇಲ್ಲಿ ತನ್ನ ಅಸ್ತಿತ್ವವನ್ನು ಕಾಣದಿದ್ದರೂ, ತುಲನಾತ್ಮಕ ಹೋಲಿಕೆಗಾಗಿ ಪ್ರಸ್ತಾವಿಸಬೇಕಾಯ್ತು. ಡಾರ್ವಿನನವಿಕಾಸವಾದದ ಅನ್ವಯ, ಸಸ್ಯ ಪ್ರಾಣಿವರ್ಗ ಮಾತ್ರವಲ್ಲ, ಮಾನವನನ್ನೂ ಸೇರಿಸಿ, ಸಕಲ ಜೀವಿಗಳಲ್ಲಿಯೂ ಸ್ಪರ್ಧೆಗಳು ಮತ್ತು ಪೈಪೋಟಿಗಳು ತಮ್ಮ ಅಳಿವು – ಉಳಿವನ್ನು

Posted in Articles, speech | Leave a comment

ಸಮಕಾಲೀನ ಸಮಸ್ಯೆಗಳಿಗೆ ಗಾಂಧೀಜಿ ವಿಚಾರಗಳ ಪ್ರಸ್ತುತತೆ

“ಕೌಶಲಾಧಾರಿತ ಶಿಕ್ಷಣ ಗಾಂಧೀಜಿಯವರ ಕನಸಾಗಿತ್ತು”- ಡಾ.ಮಂಜುನಾಥ್ ಆರ್.ಕೆ. ಬಳ್ಳಾರಿ: ಜನವರಿ 30 ಗಾಂಧೀಜಿಯವರು 7ರಿಂದ 14ನೇ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಶಿಕ್ಷಣ ಮಗು ಕೇಂದ್ರಿತವಾಗಬೇಕು. ಆಗ ಮಾತ್ರ ಮಗುವಿನ ಸಂಪೂರ್ಣ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಕೌಶಲಪೂರ್ಣ ಶಿಕ್ಷಣ ಗಾಂಧೀಜಿಯವರ ಕನಸಾಗಿತ್ತು. ಇದಕ್ಕಾಗಿ ಶಿಕ್ಷಣದಲ್ಲಿ ಕರಕುಶಲ ವಿಷಯಗಳನ್ನು

Posted in Events | Leave a comment

ಗಾಂಧಿ ಸ್ಮರಣೆ – Jan-30-2024

ಗಾಂಧಿ ಮರ

Posted in Events, Historic Report and Analysis, speech | Leave a comment

GVV ಸುಳ್ಯ ಘಟಕದ ವತಿಯಿಂದ ಗಾಂಧೀಜಿಯವರ ಆತ್ಮ ಚರಿತ್ರೆಯ ಬಗ್ಗೆ ಸಂವಾದ ಕಾರ್ಯಕ್ರಮ.

03-December-2023 ಗಾಂಧಿ ವಿಚಾರ ವೇದಿಕೆಯ ಸುಳ್ಯ ಘಟಕದ ವತಿಯಿಂದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಗಾಂಧೀಜಿಯವರ ಆತ್ಮ ಚರಿತ್ರೆಯ ಬಗ್ಗೆ ಘಟಕದ ಅಧ್ಯಕ್ಷೆ ಡಾ. ವೀಣಾ ಎನ್, ಉಪಾಧ್ಯಕ್ಷರಾದ ಶ್ರೀ ಸಂಜೀವ ಕುದ್ಪಾಜೆಯವರ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮವು ನಡೆಯಿತು. ವಿದ್ಯಾಗುರುಗಳೂ, ಗಾಂಧಿ ವಿಚಾರ ವೇದಿಕೆಯ ಸುಳ್ಯ ಘಟಕದ ಸಲಹೆಗಾರರೂ ಆದ ಪ್ರೊ. ಎಮ್. ಬಾಲಚಂದ್ರ ಗೌಡ ಅವರು

Posted in Events, speech | Leave a comment

ಇಂದಿಗೂ ಬೇಕಾದ ಗಾಂಧಿ – ನೇತಾಜಿ ಗಾಂಧಿ – GVV ಬಳ್ಳಾರಿ

ಬಳ್ಳಾರಿ, ನ.12: ಸರಳತೆ ಪ್ರಾಮಾಣಿಕತೆ ನೈತಿಕತೆ ಪಾರದರ್ಶಕತೆ ಮತ್ತು ಮಾನವೀಯತೆಯ ಮೂರ್ತ ಸ್ವರೂಪವೇ ಗಾಂಧೀಜಿ ಎಂದು ವಿಜಯಪುರದ ಪತ್ರಕರ್ತ, ಗಾಂಧಿ ಉಪಾಸಕ ನೇತಾಜಿ ಗಾಂಧಿ ಅವರು ಬಣ್ಣಿಸಿದರು.ಅವರು ನಗರದ ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಳ್ಳಾರಿಯ ಗಾಂಧಿ ವಿಚಾರ  ವೇದಿಕೆ ಸಂಯುಕ್ತಶ್ರಾಯದಲ್ಲಿ ಜರುಗಿದ “ಇಂದಿಗೂ ಬೇಕಾದ ಗಾಂಧಿ”

Posted in General | Leave a comment

ಗಾಂಧಿ ವಿಚಾರ ವೇದಿಕೆ(ರಿ)ವಿಜಯನಗರ ಜಿಲ್ಲೆ – ನಡವಳಿಗಳು

ಗಾಂಧಿ ವಿಚಾರ ವೇದಿಕೆ(ರಿ)ವಿಜಯನಗರ ಜಿಲ್ಲೆಮೊದಲ ಪೂರ್ವಭಾವಿ ಸಭೆದಿನಾಂಕ: 12.11.2023ಸ್ಥಳ: ಜಯಪ್ರಕಾಶ ನಾರಾಯಣ(ಜೆಪಿ) ಭವನ, ಹೊಸಪೇಟೆ. ಗಾಂಧಿ ವಿಚಾರ ವೇದಿಕೆ ಹೊಸಪೇಟೆ ಘಟಕದ ವಾಟ್ಸಪ್ ಗುಂಪಿನಲ್ಲಿ ಭಾನುವಾರ ಬೆಳಿಗ್ಗೆ ಸಭೆ ಸೇರಲು ನಿರ್ಧರಿಸಿದಂತೆ ನಾವುಗಳು ನಿಗದಿತ ಸ್ಥಳ ಜೆಪಿ ಭವನದಲ್ಲಿ ಸೇರಿ ಚರ್ಚಿಸಲಾಯಿತು. ಈ ಸಭೆಗೆ ನಮ್ಮ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕರಾದ ಶ್ರೀ ನೇತಾಜಿ ಗಾಂಧಿಯವರನ್ನು

Posted in Events, General, Report and Analysis | Leave a comment

ಗಾಂಧಿ ವಿಚಾರ ವೇದಿಕೆ(ರಿ) ಬಳ್ಳಾರಿ – ನಡವಳಿಗಳು

ಗಾಂಧಿ ವಿಚಾರ ವೇದಿಕೆ(ರಿ) ಬಳ್ಳಾರಿ2ನೇ ಪೂರ್ವಭಾವಿ ಸಭೆ ದಿನಾಂಕ: 11.11.2023 ಸ್ಥಳ: ಗಾಂಧಿ ಭವನ, ರಾಯಲ್ ವೃತ್ತ ಬಳ್ಳಾರಿ. ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಘಟಕದ ವಾಟ್ಸಪ್ ಗುಂಪಿನಲ್ಲಿ ಶನಿವಾರ ಸಂಜೆ ಸಭೆ ಸೇರಲು ನಿರ್ಧರಿಸಿದಂತೆ ನಾವುಗಳು ನಿಗದಿತ ಸ್ಥಳ ಗಾಂಧಿ ಭವನದಲ್ಲಿ ಸೇರಿ ಚರ್ಚಿಸಲಾಯಿತು. ಈ ಸಭೆಗೆ ನಮ್ಮ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕರಾದ

Posted in Events, General, Report and Analysis, Team | Leave a comment

GVV – ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪೋಷಕರ ಸಮಾವೇಶ – 2023

ಗಾಂಧಿ ವಿಚಾರ ವೇದಿಕೆ, ಪ್ರೌಢ ಶಾಲೆಗಳ ಸಹ ಶಿಕ್ಷಕರ ಸಂಘ,ದ.ಕ ಜಿಲ್ಲೆ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘ, ಬೆಳ್ತಂಗಡಿ ತಾಲೂಕು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪೋಷಕರ ಸಮಾವೇಶ ದಿನಾಂಕ: 5-11-2023 ಭಾನುವಾರಸ್ಥಳ: ಉತ್ಕೃಷ್ಟ ಸಭಾಂಗಣ, ಬೆಳ್ತಂಗಡಿಸಮಯ: ಬೆಳಗ್ಗೆ 9.30 ರಿಂದ ಸಂಜೆ 4.30 ಸಂವಾದ – ಡಾ.‌ಪುರುಷೋತ್ತಮ ಬಿಳಿಮಲೆ ಮತ್ತು ಡಾ. ಎಮ್. ಪ್ರಭಾಕರ ಜೋಷಿಯವರು

Posted in Events, Planning | Tagged , , | Leave a comment

ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕದಿಂದ ಕುಂದಾಪುರದ ಬಿ. ಆರ್‌. ರಾಯರ ‘ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ ಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ – 2023

ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕದಿಂದ ಕುಂದಾಪುರದ ಬಿ. ಆರ್‌. ರಾಯರ ‘ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ ಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಿದ್ದಾರೆ. ಉದಯಕುಮಾರ್ ಹಬ್ಬು ಅವರ ‘ಗಾಂಧಿ ಕತೆ’ ಯನ್ನು ಮಕ್ಕಳಿಂದ ಓದಿಸುವುದು, ದೇಶ ಭಕ್ತಿಯ ಘೋಷಣೆಗಳು, ಒಬ್ಬೊಬ್ಬ ವಿದ್ಯಾರ್ಥಿಯಿಂದ ಒಂದೊಂದು ಗಾಂಧಿ ಸಂದೇಶವನ್ನು ಹೇಳಿಸಿ ‘ಗಾಂಧಿ ತಾತನಿಗೆ ಜೈ’ ಹಾಕಿ ಹೋಗುವುದು… ಸುಂದರ

Posted in Events | Tagged | Leave a comment

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ

ಎಸ್.ಡಿ.ಎಂ. ಕಾಲೇಜಿನಲ್ಲಿ ಮಾಡಿದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸ- ಸಂವಾದದ ಮುಖ್ಯಾಂಶಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ – ಅರವಿಂದ ಚೊಕ್ಕಾಡಿ [ಇಷ್ಟು ಸಾಕು.‌ ಇನ್ನು ಸಂವಾದ. ಕೇಳಿ ಪ್ರಶ್ನೆ ಕೇಳಿ]

Posted in Events | Tagged , , , , | Leave a comment

ಮಹಾತ್ಮ ಗಾಂಧಿ ಜಯಂತಿ ಆಚರಣೆ – ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ – ನಿಡಗುಂದಿ

ಇಡೀ ದೇಶದೊಳಗೆ ಇಂದು ಅತ್ಯಂತ ಅರ್ಥವತ್ತಾದ ಗಾಂಧಿ ಜಯಂತಿ ನಡೆದಿದ್ರೆ ಅದು ಅಂಬೇಡ್ಕರ್ ನಗರದ ಈ ಸರ್ಕಾರಿ ಶಾಲೆಯಲ್ಲಿ ಮಾತ್ರ. – ಡಾ.ವಿ.ಎಸ್.ಮಾಳಿ ಆತ್ಮೀಯರೇ, ನಮ್ಮ ಶಾಲೆಯಲ್ಲಿ ನಡೆದ ಮಹಾತ್ಮ ಗಾಂಧಿ ದಿನ ದ ಎಲ್ಲ ಚಟುವಟಿಕೆಗಳನ್ನು ಕಾರ್ಯಕ್ರಮ ಗಳನ್ನ ತುಂಬಾ ತಾಳ್ಮೆಯಿಂದ ಅಷ್ಟೇ ಚಂದವಾಗಿ ಸೆರೆಹಿಡಿದು ತಮ್ಮ NEWS HUNT YOU TUBE CHANNEL

Posted in Events | Tagged , , , , , , | Leave a comment

ಗಾಂಧಿ ವಿಚಾರ ವೇದಿಕೆ – ಕಲಬುರಗಿ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಗಾಂಧೀಜಿಯವರ ಬದುಕು ಬರೆಹ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು

Posted in Events | Leave a comment

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ – ಅರಸೀಕೆರೆ ಗಾಂಧಿ ವಿಚಾರ ವೇದಿಕೆಯ ಅರಸೀಕೆರೆ ಘಟಕದ ಸಂಚಾಲಕರಾದ ನಾರಾಯಣ ರಾವ್ ಶರ್ಮಾ ಅವರ ನೇತೃತ್ವದಲ್ಲಿ GVV ಅರಸೀಕೆರೆ ಘಟಕ ಹಾಗೂ Inner wheel ಅರಸೀಕೆರೆ ವತಿಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಗಾಂಧೀಜಿ ಜೀವನ ಚರಿತ್ರೆಯ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು

Posted in Events | Leave a comment

ಗಾಂಧಿ ವಿಚಾರ ವೇದಿಕೆ – ಕೊಪ್ಪಳ – ಗಾಂಧಿ ಜಯಂತಿ ಆಚರಣೆ 2023

ಗಾಂಧಿ ವಿಚಾರ ವೇದಿಕೆಯ ಕೊಪ್ಪಳ ಘಟಕದ ಕಾರ್ಯದರ್ಶಿ ಬಸವರಾಜ ಸವಡಿಯವರ ನೇತೃತ್ವದಲ್ಲಿ ಗಾಂಧಿ ನಡಿಗೆಯ ಆಯೋಜನೆ ಮಾಡಲಾಗಿತ್ತು.

Posted in Events | Leave a comment

ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023.

ಗಾಂಧಿ ವಿಚಾರ ವೇದಿಕೆ – ಸುಳ್ಯ ಘಟಕ – ಗಾಂಧಿ ಜಯಂತಿ ಆಚರಣೆ 2023. ಸುಳ್ಯದ ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ಗಾಂಧಿ ನಡಿಗೆ – ಸುಳ್ಯ ನಗರದಿಂದ ಕೊಡಿಯಾಲಬೈಲಿನ ಗಾಂಧಿವನದವರೆಗೆ ನಡಿಗೆ. ಗಾಂಧಿ ವಿಚಾರ ವೇದಿಕೆಯ ಅಣ್ಣ ವಿನಯಚಂದ್ರ, ಪ್ರೊ. ಎಂ. ಬಾಲಚಂದ್ರಗೌಡ, ಡಾ. ಪೂವಪ್ಪ ಕಣಿಯೂರ್ ಭಾಗಿಗಳಾಗಿದ್ದರು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ

Posted in Events | Leave a comment