ತಾನೇ ಸ್ಥಾಪಿಸಿದ ಕಾರ್ಪೊರೇಷನ್ ಬ್ಯಾಂಕ್‌ನಿಂದ ಸಾಲ ಜಪ್ತಿ ಬಂದಾಗ ಮನನೊಂದು ತನ್ನ ವಜ್ರದುಂಗುರವನ್ನು ಅರೆದು ಕುಡಿದು ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಹಾಜಿ ಅಬ್ದುಲ್ಲಾ ಉಡುಪಿಯ ಬಹುದೊಡ್ಡ ದಾನಿ. ಮಹಾತ್ಮಾ ಗಾಂಧಿ ಉಡುಪಿಗೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾ ವಹಿಸಿದ್ದರು. ಕುದ್ಮಲ್ ರಂಗರಾಯರಿಗೆ ದಲಿತರ ಶಾಲೆಗೆ ಮೊದಲು ಭೂಮಿ‌ ಕೊಟ್ಟವರು. ಬಡವರಿಗೆ ವರ್ಷಕ್ಕೆ ನಾಲ್ಕು ಮುಡಿ ಅಕ್ಕಿ ಉಚಿತವಾಗಿ ಕೊಡುತ್ತಿದ್ದರು. ಕೃಷ್ಣೈಕ್ಯ ವಿಶ್ವೇಶ್ವರ ತೀರ್ಥರ ಗುರುಗಳು ಇದ್ದಾಗ ಉಡುಪಿ ಕೃಷ್ಣ ದೇವಸ್ಥಾನದಲ್ಲಿ ದೀಪದ ಎಣ್ಣೆಯ ಸಮಸ್ಯೆ ಬಂದಾಗ ಶಾಶ್ವತವಾಗಿ ಎಣ್ಣೆಯ ವ್ಯವಸ್ಥೆ ಮಾಡಿದ್ದವರು.

ಹೀಗಿದ್ದ ಹಾಜಿ ಅಬ್ದುಲ್ಲಾ ಅವರ ಹೆಸರಿನಲ್ಲಿರುವ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆಯ ಉಡುಪಿ ಘಟಕದವರು ಜಂಟಿಯಾಗಿ ಗಾಂಧಿ ಜಯಂತಿ ಪ್ರಯುಕ್ತ
03-10-2022 ರಂದು ಅಪರಾಹ್ನ 2:30 ರ ಹೊತ್ತಿಗೆ “ಪ್ರಸಕ್ತ ಸಮಾಜದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ” ಎಂಬ ಧ್ಯೇಯವಾಕ್ಯದೊಂದಿಗೆ ಶಾಂತಿ ನಡಿಗೆಯನ್ನು ಆಯೋಜಿಸಿದ್ದಾರೆ.

ಈ ನಡಿಗೆಯು ಹಾಜಿ ಅಬ್ದುಲ್ಲಾರ ನಿವಾಸದಿಂದ (ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದ ಮೂಸಿಯಂ )- ಅಜ್ಜರಕಾಡಿನ ಗ್ರಂಥಾಲಯದ ವರೆಗೆ ಇರುತ್ತದೆ.

ಮೊದಲು ಶ್ರೀ ಸಿರಾಜ್ ಅವರು ಹಾಜಿ ಅಬ್ದುಲ್ಲಾರವರ ಪ್ರತಿಮೆಗೆ ಗೌರವಪೂರ್ವಕ ಹೂವಿನ ಹಾರವನ್ನು ಸಮರ್ಪಿಸುವುದರ ಮೂಲಕ ಈ ಶಾಂತಿ ನಡಿಗೆಯನ್ನು ಪ್ರಾರಂಭಿಸುತ್ತಾರೆ.

ಅಜ್ಜರಕಾಡು ಭುಜಂಗ ಉದ್ಯಾನದಲ್ಲಿ ಶ್ರೀ ಇಕ್ಬಾಲ್ ಮನ್ನಾ ಅವರು ಹಾಜಿ ಅಬ್ದುಲ್ಲಾ ಸಾಹೇಬ್ ಬಗ್ಗೆ ಸಂಕ್ಷಿಪ್ತವಾಗಿ ಮಾತಾಡುತ್ತಾರೆ .ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಾ. ವಾಸಪ್ಪ ಯೂನಿಯನ್ ಉಪಸ್ಥಿತರಿರುತ್ತಾರೆ .

ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಗೌರವಪೂರ್ವಕವಾಗಿ ಹೂವಿನ ಹಾರವನ್ನು ಅರ್ಪಿಸುತ್ತಾರೆ. ಇಲ್ಲಿ ಶ್ರೀ ಯೋಗೀಶ್ ಶೇಟ್ ಅವರು ಗಾಂಧೀಜಿ ಮತ್ತು ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಸಂಬಂಧದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡುತ್ತಾರೆ. ನಙತರ ಗ್ರಂಥಾಲಯದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ.

ಗಾಂಧಿ ವಿಚಾರ ವೇದಿಕೆಯ ಸಂಚಾಲಕರಾದ ಡಾ. ಪಿ. ವೆಂಕಟರಾಯ ಭಂಡಾರಿಯವರು ಸಭೆಯನ್ನು ಸ್ವಾಗತಿಸುತ್ತಾರೆ.

ಶ್ರೀ ಮುರಳೀಧರ ಉಪಾಧ್ಯರ ಪ್ರಾಸ್ತಾವಿಕ ನುಡಿಗಳ ಬಳಿಕ ಶ್ರೀ ಅರವಿಂದ ಚೊಕ್ಕಾಡಿಯವರು ಹಾಜಿ ಅಬ್ದುಲ್ಲಾ ಅವರ ಪ್ರತಿನಿಧಿಸಿದ ಕೋಮು ಸೌಹಾರ್ದತೆಯನ್ನು ವಿಶೇಷವಾಗಿ ಪರಿಗಣನೆಯಲ್ಲುರಿಸಿಕೊಂಡು ಗಾಂಧೀಜಿಯವರ ಪ್ರಸ್ತುತತೆಯ ಕುರಿತಾಗಿ ಮಾತನಾಡುತ್ತಾರೆ.

ಜೊತೆಗೆ ಶ್ರೀ ಸಿರಾಜ್ ಅಹಮದ್, ಶ್ರೀ ಹುಸೇನ್ ಕೋಡಿಬೇಂಗ್ರೆ, ಶ್ರೀ ಮನ್ನಾ ಸಾಹೇಬ್, ಶ್ರೀ ಯೋಗೀಶ್ ಶೇಟ್ ಇವರು ಸಭೆಯನ್ನುದ್ದೇಶಿಸಿ ಒಂದೆರಡು ಮಾತುಗಳಾಡುತ್ತಾರೆ.

ಕೊನೆಯಲ್ಲಿ ಶ್ರೀ ಹುಸೇನ್ ಕೋಡಿಬೇಂಗ್ರೆ ಧನ್ಯವಾದ ಸಮರ್ಪಿಸುತ್ತಾರೆ.

ವೇದಿಕೆಯಲ್ಲಿ ಹಾಜಿ ಅಬ್ದುಲ್ಲಾ ವಿಶ್ವಸ್ಥರು, ಅತಿಥಿಗಣ್ಯರು ಹಾಗೂ ಗಾಂಧೀ ವಿಚಾರ ವೇದಿಕೆ, ಉಡುಪಿ ಘಟಕದ ಅಧ್ಯಕ್ಷೆ ಶ್ರೀಮತಿ ಸೌಜನ್ಯಾ ಶೆಟ್ಟಿ, ಹಿರಿಯ ಗಾಂಧಿಯನ್ ಶ್ರೀ ರಾಜಗೋಪಾಲ ಎಮ್. ಗಾಂಧಿ ವಿಚಾರ ವೇದಿಕೆ ಸುಳ್ಯ ಘಟಕದ ಅಧ್ಯಕ್ಷ ಶ್ರೀ ಲಕ್ಷ್ಮೀಶ ಗಬ್ಲಡ್ಕ, ಉಡುಪಿ ಜಿಲ್ಲಾ ಕ. ಸಾ. ಪರಿಷತ್ತು ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ಮುಂತಾದವರು ಉಪಸ್ಥಿತರಿರುತ್ತಾರೆ

ಉಡುಪಿಯಲ್ಲಿ ಗಾಂಧಿ ಜಯಂತಿ- ಶಾಂತಿಗಾಗಿ ನಡಿಗೆ.

One thought on “ಉಡುಪಿಯಲ್ಲಿ ಗಾಂಧಿ ಜಯಂತಿ- ಶಾಂತಿಗಾಗಿ ನಡಿಗೆ.

  • September 28, 2022 at 10:10 PM
    Permalink

    ಹಾಜಿ ಅಬ್ದುಲ್ಲರಂತಹ ಮಹನೀಯರನ್ನು ನೆನೆಸಿಕೊಳ್ಳುತ್ತ ಅವರ ಆದರ್ಶದ ಜೀವನವನ್ನು ಕಿಂಚಿತ್ತಾದರೂ ನಾವು ಅನುಕರಣೆ ಮಾಡುವುದೆ ದೇಶಸೇವೆ.

    Reply

Leave a Reply

Your email address will not be published. Required fields are marked *