ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕ.

ಗಾಂಧಿ ವಿಚಾರ ವೇದಿಕೆಯ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಝೇವಿಯರ್ ಡಿಸೋಜಾ ಅವರ ನೇತೃತ್ವದಲ್ಲಿ ಗಾಂಧಿ ಜಯಂತಿಯ ಕಾರ್ಯಕ್ರಮಗಳು ನಡೆದವು.
ಘಟಕದ ವತಿಯಿಂದ ಇಂದು ಎರಡು ಪ್ರತ್ಯೇಕ ಕಾರ್ಯಕ್ರಮಗಳು ನಡೆದವು.

ಒಂದು, ಬಿರುಮಲ ಬೆಟ್ಟದಲ್ಲಿ, ಬಿರುಮಲ ಬೆಟ್ಟ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ. ( ಗಾಂಧಿಜಿಯವರಿಗೆ ಸಂಬಂಧಪಟ್ಟ 3 ಐತಿಹಾಸಿಕ ಸ್ಥಳಗಳು ಇವೆ..1. ಗಾಂಧೀಜಿ 1936 ರಲ್ಲಿ ಭಾಷಣ ಮಾಡಿದ ಸ್ಥಳ ಗಾಂಧಿ ಕಟ್ಟೆ.2. ಆ ಕಾಲದಲ್ಲಿ ತೋಡಿಸಿದ ಬಾವಿ, ಬಪ್ಪಲಿಗೆ.3. ಕೋಚಣ್ಣ ರೈಗಳು ಪ್ರೀತಿಯಿಂದ ಗಾಂಧಿ ಸ್ಮರಣೆಯಲ್ಲಿ ನಿರ್ಮಿಸಿದ ಬಿರುಮಲ ಬೆಟ್ಟದ ಮೇಲಿನ ಗಾಂಧಿ ಮಂಟಪ.)ಉಭಯ ಸಂಘಟನೆಗಳ ನಾಯಕರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗಾಂಧೀಜಿ ಕುರಿತು ಮಾತನಾಡಿದೆವು.


ಇನ್ನೊಂದು… ಗಾಂಧಿ ವಿಚಾರ ವೇದಿಕೆ, ಹಿರಿಯ ನಾಗರಿಕರ ಹಿತರಕ್ಷಣಾ ಸಂಘ ಪುತ್ತೂರು ಮತ್ತು ರಾಜ್ಯ ನಿವೃತ ನೌಕರರ ಸಂಘ ಪುತ್ತೂರು ಸಹಯೋಗದಲ್ಲಿ ನಡೆದ ಕಾರ್ಯಕ್ರಮ. ಇದು ಗಾಂಧಿ ಜಯಂತಿ ಮತ್ತು ಹಿರಿಯ ನಾಗರಿಕರ ದಿನಾಚರಣೆ ಜಂಟಿ ಕಾರ್ಯಕ್ರಮ. ಹಿರಿಯ ನಾಗರೀಕರ ಬಗ್ಗೆ ಮುಖ್ಯ ಅತಿಥಿ ಡಾ. ಮಾಧವ ಭಟ್, ಗಾಂಧಿ ಕುರಿತು ಇನ್ನೊರ್ವ ಮುಖ್ಯ ಅತಿಥಿ ಶ್ರೀ ಐ. ಕೆ. ಬೊಳುವಾರು ಮಾತನಾಡಿದರು.
ಇಬ್ಬರು ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಿದೆವು. ಸುಮಾರು 100 ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲರೂ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದೂ ವಿಶೇಷ ವಾಗಿತ್ತು.

ಗಾಂಧಿ ವಿಚಾರ ವೇದಿಕೆ – ಪುತ್ತೂರು ಘಟಕ – ಗಾಂಧಿ ಜಯಂತಿ ಆಚರಣೆ 2023.