ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕದಿಂದ ಕುಂದಾಪುರದ ಬಿ. ಆರ್. ರಾಯರ ‘ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ ಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಿದ್ದಾರೆ.
ಉದಯಕುಮಾರ್ ಹಬ್ಬು ಅವರ ‘ಗಾಂಧಿ ಕತೆ’ ಯನ್ನು ಮಕ್ಕಳಿಂದ ಓದಿಸುವುದು,
ದೇಶ ಭಕ್ತಿಯ ಘೋಷಣೆಗಳು,
ಒಬ್ಬೊಬ್ಬ ವಿದ್ಯಾರ್ಥಿಯಿಂದ ಒಂದೊಂದು ಗಾಂಧಿ ಸಂದೇಶವನ್ನು ಹೇಳಿಸಿ ‘ಗಾಂಧಿ ತಾತನಿಗೆ ಜೈ’ ಹಾಕಿ ಹೋಗುವುದು…
ಸುಂದರ ಕಾರ್ಯಕ್ರಮ. ನೋಡಲು ಖುಷಿ ಕೊಡುತ್ತದೆ.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನಿಂಗಣ್ಣ ಅವರು ಬಹು ಚೆನ್ನಾಗಿ ಪ್ರಾಸ್ತಾವಿಕ ಮಾತನಾಡಿದರು.
ಈ ಕೆಲಸವನ್ನು ಸಾಧಿಸಿದವರು ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕದ ಅಧ್ಯಕ್ಷ 84 ವರ್ಷ ವಯಸ್ಸಿನ ಶ್ರೀ ಉಪೇಂದ್ರ ಸೋಮಯಾಜಿ ಅವರು, ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಶ್ರೀ ಸೋಮಶೇಖರ ಶೆಟ್ಟಿ ಅವರು, ಮತ್ತು ಗಾಂಧಿ ವಿಚಾರ ವೇದಿಕೆಯ ಉಡುಪಿ ಜಿಲ್ಲಾ ಉಪಾಧ್ಯಕ್ಷರೂ, ಜಿಲ್ಲಾ ಕ. ಸಾ. ಪ ಅಧ್ಯಕ್ಷರೂ ಆದ ಶ್ರೀ ನೀಲಾವರ ಸುರೇಂದ್ರ ಅಡಿಗ ಅವರು.
ಇಂತಹ ಕಾರ್ಯಕ್ರಮಗಳ ಹೆಚ್ಚಬೇಕು. ಗಾಂಧಿ ವಿಚಾರ ವೇದಿಕೆಯ ಆಶಯವನ್ನು ಶಾಲೆ ಶಾಲೆಗಳಿಗೆ ತಲುಪಿಸಲು ಹೊರಟಿರುವ ಈ ಮೂವರು ಹಿರಿಯರಿಗೆ ಅವರಿಗಿಂತ ಸಣ್ಣವನಾಗಿ ಕೃತಜ್ಞತೆಗಳು. ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. – [ಶ್ರೀ ಅರವಿಂದ ಚೊಕ್ಕಾಡಿ.]