ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ’ ಈ
ಶೀರ್ಷಿಕೆಯ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ
ಇಂದು (07-07-2023) ಜರುಗಿತು.
ನಿಡಗುಂದಿ ತಾಲೂಕಿನ ಬೇನಾಳ ಆರ್.ಎಸ್.ಗ್ರಾಮದ
ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ವತಿ ಯಿಂದ ಈ
ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಿಎಲ್ಲಿ ಬ್ಯಾಂಕ್ ಚೇರ್ ಮನ್ ರಾದ ಶ್ರೀ ಐ.ಸಿ.ಪಟ್ಟಣ ಶೆಟ್ಟಿ
ಅವರು ಬಾಪೂಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ
ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾ
ಟಿಸಿದರು.
ಬಾಪೂ ಜೊತೆಗಿರುವ ನೇತಾಜಿ, ನೆಹರೂ, ಪಟೇಲ್, ತಿಲಕ್,
ಗೋಖಲೆ, ಸರೋಜಿನಿ ನಾಯ್ಡು, ಕಸ್ತೂರಬಾ, ಮೀರಾ
ಬೆನ್, ಟ್ಯಾಗೋರ್, ಮಾಳವೀಯ, ಆಜಾದ್, ಗಫಾರ್
ಖಾನ್ ಸೇರಿದಂತೆ ವಿವಿಧ ಸ್ವಾತಂತ್ರ್ಯ ಸೇನಾನಿಗಳ ಹಾಗೂ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯ ವಿವಿಧ ಬಗೆಯ
50 ಛಾಯಾಚಿತ್ರ ಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ – ಉಪನ್ಯಾಸ ಕಾರ್ಯಕ್ರಮ.
ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಯವರ ಪಾತ್ರ – ಉಪನ್ಯಾಸ ಕಾರ್ಯಕ್ರಮ.