ಆಲಮಟ್ಟಿಯ ಹರ್ಡೇಕರ ಮಂಜಪ್ಪ ಕಾಲೇಜಿನಲ್ಲಿ ನಡೆಸಿದ ಸರ್ವೋದಯ ದಿನಾಚರಣೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಉತ್ತರ ಕರ್ನಾಟಕದ ಸಂಯೋಜಕ ಶ್ರೀ ನೇತಾಜಿ- ಗಾಂಧಿ ಭಾಗವಹಿಸಿದರು

ಬಿ.ಆರ್ ರಾಯರ ಹಿಂದು ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಗಾಂಧಿ ವಿಚಾರವೇದಿಕೆ(ರಿ)ಬ್ರಹ್ಮಾವರ ತಾಲೂಕು ಘಟಕ ದ ಆಶ್ರಯದಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ ನಡೆಯಿತು. ಗಾಂಧಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಗಳಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ ಅವರು ಮಾತನಾಡಿ ಗಾಂಧಿ ಯವರ ಆದರ್ಶ ವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.ಗಾಂಧಿ ವಿಚಾರ ವೇದಿಕೆಯ ಬ್ರಹ್ಮಾವರ ಘಟಕ ದ ಅಧ್ಯಕ್ಷ ಪ್ರೋ ಉಪೇಂದ್ರ ಸೋಮಯಾಜಿ, ರವಿಶಂಕರ್ ಹೆಬ್ಬಾರ್, ಪ್ರಕಾಶ್ ಹೆಬ್ಬಾರ್ ,ನೀಲಾವರ ಸುರೇಂದ್ರ ಅಡಿಗ,ಅಧ್ಯಕ್ಷ ಕಸಾಪ ಉಡುಪಿ ಜಿಲ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಕು ಸುಮಂತ್ ಶೆಣೈ ಗಾಂಧಿ ಹೇಳಿದ ಕಥೆ ವಾಚನ ಮಾಡಿದನು. ಮೀರಾ ಶೇಟ್ ಸ್ವಾಗತಿಸಿದರು. ವಂದನಾರ್ಪಣೆಯನ್ನು ಕಲ್ಪನಾ ಮಾಡಿದರೆ ಕಾರ್ಯಕ್ರಮ ದ ನಿರೂಪಣೆ ಯನ್ನು ಶಿಕ್ಷಕಿ ಶ್ರುತಿ ನೆರವೇರಿಸಿದರು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಲಿಂಗಪ್ಪ ವಹಿಸಿ ಪ್ರಸ್ತಾವಿಕ ಮಾತನಾಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕ ಜಂಟಿಯಾಗಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಕಾಲಿನ ಸಮಸ್ಯೆಗಳಿಗೆ ಗಾಂಧೀಜಿ ವಿಚಾರಗಳ ಪ್ರಸ್ತುತತೆ ಕುರಿತು ನಮ್ಮ ಗಾಂಧಿ ವಿಚಾರ ವೇದಿಕೆ ಸದಸ್ಯರು ಹಾಗೂ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ದಂತ ವೈದ್ಯಕೀಯ ವಿಜ್ಞಾನ ಕಾಲೇಜು ವಿಮ್ಸ್ ಬಳ್ಳಾರಿ ಡಾಕ್ಟರ್ ಮಂಜುನಾಥ್ ಆರ್ ಕೆ ಮಾತನಾಡಿ ಗಾಂಧೀಜಿಯವರ ಶಿಕ್ಷಣದ ಬಗೆಗಿನ ಪರಿಕಲ್ಪನೆಗಳು, ಮಗು ಕೇಂದ್ರದ ಶಿಕ್ಷಣ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ಅನಿವಾರ್ಯ ಎಂಬುದನ್ನ ತಿಳಿಸಿದರು ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಅಹಿರಾಜ್ ಗಾಂಧೀಜಿಯವರ ಮಾತಿಗೆ ಇಡೀ ದೇಶವೇ ಸಮ್ಮತಿ ನೀಡುತ್ತಿತ್ತು ಎಂದರೆ ಗಾಂಧಿಜಿ ಅವರ ನಡೆ-ನುಡಿಗಳ ಸಮನ್ವಯತೆ ಕಾರಣ ಎಂದು ತಿಳಿಸಿದರು, ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ಶ್ರೀ ನಾಗರಾಜ್ ಅವರು ವಿದ್ಯಾರ್ಥಿಗಳಿಗೆ ಅಧ್ಯಯನದ ಕಡೆ ಹೆಚ್ಚು ಗಮನಕೊಡಲು ಕಿವಿ ಮಾತು ಕೇಳಿದರು, ಶಿಕ್ಷಕರಾದ ರಂಗಪ್ಪ ಅವರು ಸ್ವಾಗತಿಸಿದರು, ಶಿಕ್ಷಕಿ ಪ್ರದರ್ಶಿನಿ ವಂದಿಸಿದರು, ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಜಿಲ್ಲಾ ಸಂಘಟಕರಾದ ಡಾಕ್ಟರ್ ನಾಗರಾಜ್ ಬಸರಕೋಡು ಕಾರ್ಯಕ್ರಮ ನಿರೂಪಿಸಿದರು.

ಗಾಂಧಿ ವಿಚಾರ ವೇದಿಕೆ, ಪುತ್ತೂರು ತಾಲೂಕು ಘಟಕದ ವತಿಯಿಂದ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಪಡ್ಡಾಯೂರ್, ಉಪ್ಪಿನಂಗಡಿ ಹೋಬಳಿ, ಪುತ್ತೂರು ಇಲ್ಲಿ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಶ್ರೀ. ಗೋಪಾಲಕೃಷ್ಣ ಉಪಾಧ್ಯಾಯ, ನಿವೃತ ಪ್ರಾಂಶುಪಾಲರು ಹಾಗೂ ವೇದಿಕೆ ಜತೆ ಕಾರ್ಯದರ್ಶಿ ಗಾಂಧಿ ಸ್ಮರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯ ಅಧ್ಯಕ್ಷರಾದ ಝೇವಿಯರ್ ಡಿಸೋಜಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗಾಂಧಿ ಭಜನೆ ನಡೆಸಿಕೊಟ್ಟರು. ವಸತಿ ಶಾಲೆಯ ಅಧ್ಯಾಪಕರು, ನಿಲಯಪಾಲಕರು ಹಾಗೂ ಸಿಬ್ಬಂದಿ ಪಾಲ್ಗೊಂಡರು.

ಗಾಂಧಿ ಮರ

ಮಹಾತ್ಮಾ ಗಾಂಧಿಯವರ ಚಿತಾಭಸ್ಮ ಹಾಕಿ ನೆಟ್ಟ ಆಲದ ಮರವು ‘ಗಾಂಧಿ ಮರ’/ ಗಾಂಧಿ ಕಟ್ಟೆ ಎಂದೇ ಹೆಸರಾಗಿ ಬೆಳ್ತಂಗಡಿಯ ಮುಂಡಾಜೆಯಲ್ಲಿದೆ. ಇವತ್ತು ಬೆಳಗ್ಗೆ ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀ ಶ್ರೀಧರ ಭಿಡೆಯವರು, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಗಣೇಶ್ ಬಂಗೇರ್ರು, ಗ್ರಾ. ಪಂ. ಉಪಾಧ್ಯಕ್ಷರು, ಶ್ರೀ ರಾಮಣ್ಣ ಶೆಟ್ರು ಎಲ್ಲ ಹೋಗಿ ಗಾಂಧಿ ವಂದನವನ್ನು ಸಲ್ಲಿಸಿ ಬಂದೆವು.
ಗಾಂಧಿ ಮರ – ಬೆಳ್ತಂಗಡಿಯ ಮುಂಡಾಜೆಯಲ್ಲಿ
ಗಾಂಧಿ ಮರ – ಬೆಳ್ತಂಗಡಿಯ ಮುಂಡಾಜೆಯಲ್ಲಿ
ಗಾಂಧಿ ಮರ – ಬೆಳ್ತಂಗಡಿಯ ಮುಂಡಾಜೆಯಲ್ಲಿ
ಗಾಂಧಿ ಸ್ಮರಣೆ – Jan-30-2024

Leave a Reply

Your email address will not be published. Required fields are marked *