ಗಾಂಧಿ ವಿಚಾರ ವೇದಿಕೆ(ರಿ) ಬಳ್ಳಾರಿ
2ನೇ ಪೂರ್ವಭಾವಿ ಸಭೆ


ದಿನಾಂಕ: 11.11.2023 ಸ್ಥಳ: ಗಾಂಧಿ ಭವನ, ರಾಯಲ್ ವೃತ್ತ ಬಳ್ಳಾರಿ.


ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಘಟಕದ ವಾಟ್ಸಪ್ ಗುಂಪಿನಲ್ಲಿ ಶನಿವಾರ ಸಂಜೆ ಸಭೆ ಸೇರಲು ನಿರ್ಧರಿಸಿದಂತೆ ನಾವುಗಳು ನಿಗದಿತ ಸ್ಥಳ ಗಾಂಧಿ ಭವನದಲ್ಲಿ ಸೇರಿ ಚರ್ಚಿಸಲಾಯಿತು. ಈ ಸಭೆಗೆ ನಮ್ಮ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕರಾದ ಶ್ರೀ ನೇತಾಜಿ ಗಾಂಧಿಯವರನ್ನು ಆಹ್ವಾನಿಸಿಲಾಗಿತ್ತು.
ಸಭೆಯಲ್ಲಿ ಚರ್ಚಿಸಲಾದ ಅಂಶಗಳು:


• ಮೊದಲಿಗೆ ಸಂಘಟಕರಾದ ಡಾ. ನಾಗರಾಜ ಬಸರಕೋಡು, ಅವರು ನಮ್ಮ ಗಾಂಧಿ ವಿಚಾರ ವೇದಿಕೆ ರಚನೆಯ ಉದ್ದೇಶಗಳನ್ನು, ವೇದಿಕೆಯ ಸದಸ್ಯರ ಬಗ್ಗೆ, ಮಾತೃ ಘಟಕದ ಕಾರ್ಯವೈಖರಿಯ ಬಗ್ಗೆ ಸಭಿಕರಿಗೆ ತಿಳಿಸಲಾಯಿತು.
• ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಘಟಕವನ್ನು ರಚಿಸಲು ಸಮಾನ ಮನಸ್ಕರನ್ನು ಸೇರಿಸಿರುವುದರಿಂದ ಇಲ್ಲಿ ಎಲ್ಲರೂ ಸಮಾನರಾಗಿದ್ದು, ಮುಕ್ತವಾಗಿ ವೇದಿಕೆ ರಚನೆ ಬಗ್ಗೆ ಹಾಗೂ ವೇದಿಕೆಯು ಸಾಗಬೇಕಾದ ವಿವಿಧ ರೀತಿಯ ಮಾರ್ಗಗಳ ಬಗ್ಗೆ ಹಂಚಿಕೊಳ್ಳಲಾಯಿತು.
• ಸಭೆಯಲ್ಲಿ ಭಾಗವಹಿಸಿದವರು ವೇದಿಕೆಯ ಉದ್ದೇಶಗಳನ್ನು ಶ್ಲಾಘಿಸುತ್ತಾ ಗಾಂಧಿ ವಿಚಾರಗಳನ್ನು ಯುವಜನರಿಗೆ ಮುಟ್ಟಿಸುವ ತುರ್ತು ಅಗತ್ಯತೆ ಈಗ ಇದೆ. ಅವರಲ್ಲಿ ಜಾತ್ಯತೀತ, ನೈತಿಕ ಹಾಗೂ ಆರ್ಥಿಕ ಮೌಲ್ಯಗಳನ್ನು ಬೆಳೆಸಲು ಈ ಗಾಂಧಿ ವಿಚಾರಗಳು ಅನಿವಾರ್ಯ ಎಂದರು.
• ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶುಲ್ಕ ರಹಿತವಾಗಿ ಸದಸ್ಯರನ್ನಾಗಿ ಮಾಡಿಸಲು ಸಾಧ್ಯವೇ? ಯೋಚನೆ ಮಾಡಿ ಎಂದು ಸಲಹೆ ಕೊಟ್ಟರು.
• ಶಾಲೆಗಳಲ್ಲಿ ವಿವಿಧ ರೀತಿಯ ಸ್ಪರ್ಧೆ ಚಿತ್ರ ಬಿಡಿಸುವ, ಕವನ ಬರೆಯುವ ಪ್ರಬಂಧ, ನಾಟಕಗಳನ್ನು ಏರ್ಪಡಿಸಬಹುದು ಎಂಬ ಸಲಹೆ ನೀಡಿದರು.
• ನೇತಾಜಿ ಬಳ್ಳಾರಿಗೆ ಯಾವಾಗ ಕರೆದರೂ ರ‍್ತೀನಿ, ವೇದಿಕೆ ತಿಂಗಳಿಗೆ ಕನಿಷ್ಟ ಎರಡು ಕಾರ್ಯಕ್ರಮಗಳನ್ನು ಆಯೋಜಿಸದರೆ ಉತ್ತಮ ಎಂದರು.
• ಸಾರ್ವಜನಿಕರಿಗೆ ರೂಪಕಗಳನ್ನು ಏರ್ಪಡಿಸುವುದು.
• ಕನ್ನಡ ಸಾಹಿತ್ಯ ಪರಿಷತ್ತಿನಂತಹ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು.
• ಪ್ರಚಲಿತವಾಗಿ ಗಾಂಧಿ ದೂಷಣೆಯ ಬಗ್ಗೆ ಖೇದ ವ್ಯಕ್ತಪಡಿಸಿ, ಅವುಗಳಿಗೆ ಸಾತ್ವಿಕವಾಗಿ ಉತ್ತರ ಕೊಡುವುದು.
• ನೇತಾಜಿ ತಾವು ಗಾಂಧೀಜಿ ಹೆಜ್ಜೆ ಗುರುತುಗಳ ಸ್ಥಳಗಳಿಗೆ ಭೇಟಿ ನೀಡುವ ಅಭ್ಯಾಸವಿದ್ದು, ಜಗತ್ತಿನ ವಿವಿಧ ದೇಶಗಳಲ್ಲಿ ಗಾಂಧಿ ಪ್ರಭಾವ ಇರುವುದನ್ನು, ಅಮೇರಿಕಾ ದೇಶದಲ್ಲಿ 1600 ಸ್ಥಳಗಳಲ್ಲಿ ಗಾಂಧಿ ಪ್ರತಿಮೆಗಳಿವೆ. ಟೆಕ್ಷಾಸ್ ರಾಜ್ಯದಲ್ಲಿ ಮಹಾತ್ಮ ಗಾಂಧಿಜಿ ಹೆಸರಿನ ಜಿಲ್ಲೆಯಿದೆ. ಇತ್ತೀಚಿಗೆ ಯುದ್ಧ ಪೀಡಿತ ರಾಷ್ಟçಗಳಲ್ಲಿ ಯುದ್ಧ ವಿರೋಧಿಸಿ ನಡೆಸಲಾದ ಪ್ರತಿಭಟನೆಗಳಲ್ಲಿ ಗಾಂಧಿ ಪೋಟೊ ಬಳಸಿದನ್ನು ಉಲ್ಲೇಖಿಸಿ, ಆದರೆ ನಮ್ಮ ದೇಶದಲ್ಲಿ ಗಾಂಧಿ ಬಗ್ಗೆ ನಡೆಯುವ ಅವಹೇಳನದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
• ಸದಸ್ಯತ್ವ ಶುಲ್ಕ 1000 ರುಪಾಯಿಗಳು ಹೊರೆಯಾಗಬಹುದು. ಅದರ ಬದಲು ಎಲ್ಲರಿಗೂ 500ರುಪಾಯಿಗಳನ್ನು ಮಾಡಿದರೆ ಉತ್ತಮ ಎಂಬ ಅನಿಸಿಕೆ ವ್ಯಕ್ತಪಡಿಸಿದರು.
• ಜಗತ್ತನ್ನು ಆಳುವ ತಂತ್ರಜ್ಞಾನಾಧಾರಿತ ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಿಸಿಕೊಂಡಾಗ ಮಾತ್ರ ಗಾಂಧಿ ವಿಚಾರಗಳು ಬಹಳಷ್ಟು ಜನರನ್ನು ತಲುಪಲು ಸಾಧ್ಯ ಅದಕ್ಕಾಗಿ ವೇದಿಕಯಲ್ಲಿ ಐಟಿ ಸೆಲ್ ತರಹ ಕೆಲಸ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
• ಕೊನೆಗೆ ಎಲ್ಲರೂ ಬೇಗ ಸದಸ್ಯತ್ವ ಪಡೆದು, ಆಸಕ್ತರನ್ನು ಸದಸ್ಯರನ್ನಾಗಿಸೋಣ, ನಂತರ ಜವಾಬ್ದಾರಿಗಳನ್ನು ಹಂಚಿಕೊAಡು ಕಾರ್ಯಪ್ರವೃತ್ತರಾಗೋಣ ಎಂದರು.
• ನಮ್ಮ ಕರೆಗೆ ಹೋಗೊಟ್ಟು ಬಂದ ಎಲ್ಲಾ ಸಮಾನ ಮನಸ್ಕರರಿಗೆ ವಂದನೆಗಳನ್ನು ತಿಳಿಸಿ ಸಭೆಗೆ ವಿರಾಮ ಕೊಟ್ಟೆವು.
ಸಭೆಯಲ್ಲಿ ಭಾಗವಹಿಸಿದವರು:

 1. ನೇತಾಜಿ ಗಾಂಧಿ- ಉತ್ತರ ಕರ್ನಾಟಕ ಸಂಚಾಲಕರು, ಗಾಂಧಿ ವಿಚಾರ ವೇದಿಕೆ
 2. ಡಾ. ನಿಷ್ಠಿ ರುದ್ರಪ್ಪ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಬಳ್ಳಾರಿ
 3. ನಾಗಿರೆಡ್ಡಿ- ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಘಟಕ ಬಳ್ಳಾರಿ
 4. ವೀರೇಂದ್ರ ರಾವಿಹಾಳ್- ಯುವ ಕಥೆಗಾರರು, ಸಿರುಗುಪ್ಪ
 5. ಡಾ.ವಿಜಯಕುಮಾರ- ಪ್ರೊಫೆಸರ್, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
 6. ಪಿ.ಆರ್.ವೆಂಕಟೇಶ್- ಹೋರಾಟಗಾರರು, ಬಳ್ಳಾರಿ
 7. ಅಬ್ದುಲ್ ಹೈ ತೋರಣಗಲ್ಲು- ಗಜಲ್‌ಕಾರರು, ಬಳ್ಳಾರಿ
 8. ಎಂ.ರಮೇಶ ಕುಮಾರ- ಪೊಲೀಸ್ ಇಲಾಖೆ, ಬಳ್ಳಾರಿ
 9. ಆಲಂ ಭಾಷಾ – ಆರೋಗ್ಯ ಇಲಾಖೆ, ಬಳ್ಳಾರಿ
 10. ಶಬ್ಬೀರ್ ಭಾಷಾ- ಮಹಾನಗರ ಪಾಲಿಕೆ ಬಳ್ಳಾರಿ
 11. ಡಾ. ನಾಗರಾಜ ಬಸರಕೋಡು

ಧನ್ಯವಾದಗಳು: ಡಾ. ನಾಗರಾಜ ಬಸರಕೋಡು,
ಸಂಘಟಕರು,
ಗಾಂಧಿ ವಿಚಾರ ವೇದಿಕೆ ಬಳ್ಳಾರಿ
9916315278


ಗಾಂಧಿ ವಿಚಾರ ವೇದಿಕೆ(ರಿ) ಬಳ್ಳಾರಿ – ನಡವಳಿಗಳು

Leave a Reply

Your email address will not be published. Required fields are marked *