ಗಾಂಧಿ ವಿಚಾರ ವೇದಿಕೆ(ರಿ)ವಿಜಯನಗರ ಜಿಲ್ಲೆ
ಮೊದಲ ಪೂರ್ವಭಾವಿ ಸಭೆ
ದಿನಾಂಕ: 12.11.2023
ಸ್ಥಳ: ಜಯಪ್ರಕಾಶ ನಾರಾಯಣ(ಜೆಪಿ) ಭವನ, ಹೊಸಪೇಟೆ.

ಗಾಂಧಿ ವಿಚಾರ ವೇದಿಕೆ ಹೊಸಪೇಟೆ ಘಟಕದ ವಾಟ್ಸಪ್ ಗುಂಪಿನಲ್ಲಿ ಭಾನುವಾರ ಬೆಳಿಗ್ಗೆ ಸಭೆ ಸೇರಲು ನಿರ್ಧರಿಸಿದಂತೆ ನಾವುಗಳು ನಿಗದಿತ ಸ್ಥಳ ಜೆಪಿ ಭವನದಲ್ಲಿ ಸೇರಿ ಚರ್ಚಿಸಲಾಯಿತು. ಈ ಸಭೆಗೆ ನಮ್ಮ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕರಾದ ಶ್ರೀ ನೇತಾಜಿ ಗಾಂಧಿಯವರನ್ನು ಆಹ್ವಾನಿಸಿಲಾಗಿತ್ತು.
ಸಭೆಯಲ್ಲಿ ಚರ್ಚಿಸಲಾದ ಅಂಶಗಳು:
• ಮೊದಲಿಗೆ ಸಂಘಟಕರಾದ ಡಾ. ನಾಗರಾಜ ಬಸರಕೋಡು, ಅವರು ನಮ್ಮ ಗಾಂಧಿ ವಿಚಾರ ವೇದಿಕೆ ರಚನೆಯ ಉದ್ದೇಶಗಳನ್ನು, ವೇದಿಕೆಯ ಸದಸ್ಯರ ಬಗ್ಗೆ, ಮಾತೃ ಘಟಕದ ಕಾರ್ಯವೈಖರಿಯ ಬಗ್ಗೆ ಸಭಿಕರಿಗೆ ತಿಳಿಸಲಾಯಿತು.
• ಗಾಂಧಿ ವಿಚಾರ ವೇದಿಕೆ ವಿಜಯನಗರ ಜಿಲ್ಲಾ ಘಟಕವನ್ನು ರಚಿಸಲು ಸಮಾನ ಮನಸ್ಕರನ್ನು ಸೇರಿಸಿರುವುದರಿಂದ ಇಲ್ಲಿ ಎಲ್ಲರೂ ಸಮಾನರಾಗಿದ್ದು, ಮುಕ್ತವಾಗಿ ವೇದಿಕೆ ರಚನೆ ಬಗ್ಗೆ ಹಾಗೂ ವೇದಿಕೆಯು ಸಾಗಬೇಕಾದ ವಿವಿಧ ರೀತಿಯ ಮಾರ್ಗಗಳ ಬಗ್ಗೆ ಹಂಚಿಕೊಳ್ಳಲಾಯಿತು.
• ಸಭೆಯಲ್ಲಿ ಭಾಗವಹಿಸಿದವರು ವೇದಿಕೆಯ ಉದ್ದೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕರ್ನಾಟಕ ಇತಿಹಾಸ ಅಕಾಡೆಮಿಗಳಂತಹ ವಿವಿಧ ಅಕಾಡೆಮಿಗಳ ರೀತಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಮಾಡುವುದು ಹಾಗೂ ವಾರ್ಷಿಕ ಸಮ್ಮೇಳನಗಳನ್ನು ಆಯೋಜಿಸುವುದು ಉತ್ತಮ ಎಂಬ ಸಲಹೆ ನೀಡಿದರು.
• ಗಾಂಧಿ ವಿಚಾರಧಾರೆಯನ್ನು ಮುಟ್ಟಿಸುವ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳನ್ನು ಜೊತೆ ಚರ್ಚೆಮಾಡಿ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು.
• ಗಾಂಧಿ ವಿಚಾರಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಬಿತ್ತುವ ಅನಿವಾರ್ಯತೆ ಇರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು ಹಾಗೂ ಸ್ವತಃ ಗಾಂಧೀಜಿಯವರ ಮೂಲ ಲೇಖನ, ಪುಸ್ತಕಗಳನ್ನು ಕೊಟ್ಟು ಓದಿಸುವುದು, ಅವರು ಗ್ರಹಿಸಿದಂತೆ ಅಭಿವ್ಯಕ್ತಿಸಲು, ಭಾಷಣ, ಪ್ರಬಂಧ, ಚರ್ಚೆಗಳನ್ನು ಆಯೋಜಿಸವುದು.
• ಗಾಂಧಿ ಬಗೆಗೆ ಬಂದಿರುವ ಇತರ ಲೇಖಕರ ಅಭಿಪ್ರಾಯ ಬಿಂಬಿಸುವ ಪುಸ್ತಕ, ಲೇಖನಗಳನ್ನು ನೀಡುವುದಕ್ಕಿಂತ ಮೂಲ ಲೇಖನ, ಪುಸ್ತಕಗಳನ್ನು ನೀಡಿದಾಗ ಅವರನ್ನು ಯೋಚನೆಗೆ ಹಚ್ಚಿದಂತಾಗುವುದು. ನಂತರ ವಿಚಾರ ವಿನಿಮಯ, ಸಂವಾದಕ್ಕೆ ಅವಕಾಶ ನೀಡಬಹುದು.
• ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಿರುವ ಗಾಂಧಿ ಅಧ್ಯಯನ ಪೀಠಗಳೊಂದಿಗೆ, ಸಂಬಂಧಪಟ್ಟವರನ್ನು ಸಂಪರ್ಕಿಸಿ ಒಟ್ಟಾಗಿ ಕೆಲಸ ಮಾಡುವಂತಾದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು.
• ವಿಶೇಷವಾಗಿ ಹೈಸ್ಕೂಲ್ ಮತ್ತು ಪಿ.ಯು.ಕಾಲೇಜಿನ ಮಕ್ಕಳನ್ನು ತಲುಪುವಂತಹ ಯೋಜನೆ, ಕಾರ್ಯಕ್ರಮಗಳನ್ನು ಯೋಚಿಸುವುದು ಹಾಗೂ ಆಯೋಜಿಸುವುದು.
• ವಾಟ್ಸಪ್ ಗುಂಪಿನಲ್ಲಿ ಗಾಂಧಿಯವರ ಬಗೆಗೆ ಬಂದಿರುವ ವಿವಿಧ ಲೇಖಕರ ಪುಸ್ತಕಗಳ ಹೆಸರುಗಳು, ಎಲ್ಲಿ ಲಭಿಸುತ್ತವೆ? ಇತ್ಯಾದಿ ಮಾಹಿತಿಗಳನ್ನು ಹಂಚಿಕೊAಡು ಪುಸ್ತಕಗಳನ್ನು ಓದುವಂತೆ ಉತ್ತೇಜಿಸುವುದು ಹಾಗೂ ಓದಿದ ಪುಸ್ತಕಗಳ ಬಗ್ಗೆ ವೇದಿಕೆಯಲ್ಲಿ ಚರ್ಚಿಸುವುದು.
• ವಾರಕ್ಕೊಮ್ಮಯಾದರೂ ಕೇಂದ್ರ ಸ್ಥಳದಲ್ಲಿರುವವರು ವೇದಿಕೆಯ (ಜೆಪಿ ಭವನ)ಲ್ಲಿ ಸೇರಿ ಚರ್ಚಿಸುವುದು.
• ಜಿಲ್ಲಾ ಘಟಕ ಸಕ್ರಿಯಾವಾಗಿ ಕಾರ್ಯಾರಂಭ ಮಾಡಿದ ನಂತರ ಇದನ್ನು ತಾಲೂಕು ಘಟಕಗಳಾಗಿ ವಿಸ್ತರಿಸಲು ಆಸಕ್ತರನ್ನು ಗುರುತಿಸಿ ಪ್ರೋತ್ಸಾಹಿಸುವುದು.
• ವೇದಿಕಯಲ್ಲಿ ಐಟಿ ಸೆಲ್ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
• ವಿಜಯನಗರ ಜಿಲ್ಲಾ ಘಟಕದ ಪತ್ರವ್ಯವಹಾರಕ್ಕಾಗಿ ಎಲ್ಲರೂ ಡಾ.ನಂದೀಶ್ವರ ದಂಡೆ ಅವರನ್ನು ತಾತ್ಕಾಲಿಕವಾಗಿ ಜಿಲ್ಲಾ ಸಂಚಾಲಕರಾಗಿ ಜವಾಬ್ದಾರಿಯನ್ನು ನೀಡಿ, ಒಂದು ವಿಳಾಸದ ಅಗತ್ಯವಿರುವುದರಿಂದ ಅವರ ವಿಳಾಸವನ್ನೇ ಗಾಂಧಿ ವಿಚಾರ ವೇದಿಕೆ(ರಿ) ವಿಜಯನಗರ(ಹೊಸಪೇಟೆ) ವಿಳಾಸವನ್ನಾಗಿ ಬಳಸಲು ನಿರ್ಧರಿಸಿದರು.
• ತಕ್ಷಣವೇ ಸದಸ್ಯತ್ವ ಅರ್ಜಿಗಳನ್ನು ತರಿಸಿಕೊಂಡು ಗೌರವ ಸದಸ್ಯತ್ವ ಪಡೆಯುವವರಿಗೆ ಹಾಗೂ ಸಾಮಾನ್ಯ ಸದಸ್ಯತ್ವ ಪಡೆಯುವವರಿಗೆ ವಿತರಿಸಿವುದು.
• ನಮ್ಮ ಕರೆಗೆ ಹೋಗೊಟ್ಟು ಬಂದ ಎಲ್ಲಾ ಸಮಾನ ಮನಸ್ಕರರಿಗೆ ಹಾಗೂ ವೇದಿಕೆಗೆ ಸ್ಥಳಾವಕಾಶ ಮಾಡಿಕೊಟ್ಟ ಜೆಪಿ ಭವನದ ಟ್ರಸ್ಟಿಗಳಿಗೆ ವಂದನೆಗಳನ್ನು ತಿಳಿಸಿ ಸಭೆಗೆ ವಿರಾಮ ಕೊಟ್ಟೆವು.
ಸಭೆಯಲ್ಲಿ ಭಾಗವಹಿಸಿದವರು:

  1. ನೇತಾಜಿ ಗಾಂಧಿ- ಉತ್ತರ ಕರ್ನಾಟಕ ಸಂಚಾಲಕರು, ಗಾಂಧಿ ವಿಚಾರ ವೇದಿಕೆ
  2. ಡಾ. ಅಮರೇಶ ನುಗಡೋಣಿ- ಖ್ಯಾತ ಕಥೆಗಾರರು, ನಿವೃತ್ತ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
  3. ಡಾ. ಕೆ.ರವೀಂದ್ರನಾಥ- ಲೇಖಕರು, ಸಂಶೋಧಕರು, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
  4. ಡಾ. ಎಫ್.ಟಿ.ಹಳ್ಳಿಕೇರಿ- ಲೇಖಕರು, ಸಂಶೋಧಕರು, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
  5. ಡಾ. ನಂದೀಶ್ವರ ದಂಡೆ- ಲೇಖಕರು, ಸಂಶೋಧಕರು, ಹೊಸಪೇಟೆ.
  6. ಪ್ರೊ.ಯು.ಆರ್.ರಾಘವೇಂದ್ರ- ಲೇಖಕರು, ನಿವೃತ್ತ ಪ್ರಾಂಶುಪಾಲರು, ಥಿಯೋಸಾಫಿಕಲ್ ಮಹಿಳಾ ಪದವಿ ಕಾಲೇಜು, ಹೊಸಪೇಟೆ
  7. ಬಿ.ಎಂ.ಮೃತ್ಯುAಜಯ- ನಿವೃತ್ತ ಶಿಕ್ಷಕರು, ಮರಿಯಮ್ಮನಹಳ್ಳಿ
  8. ಕಾಂಚನ್- ಸದಸ್ಯರು, ಸರ್ವೋದಯ ಟ್ರಸ್ಟ್, ಜೆಪಿಭವನ, ಹೊಸಪೇಟೆ
    ಡಾ. ನಾಗರಾಜ ಬಸರಕೋಡು, ಸಂಘಟಕರು, ಗಾಂಧಿ ವಿಚಾರ ವೇದಿಕೆ, ವಿಜಯನಗರ ಜಿಲ್ಲೆ

• ಪತ್ರವ್ಯವಹಾರದ ವಿಳಾಸ:
ಡಾ.ನಂದೀಶ್ವರ ದಂಡೆ
ಜಿಲ್ಲಾ ಸಂಚಾಲಕರು
ಗಾಂಧಿ ವಿಚಾರ ವೇದಿಕೆ, ವಿಜಯನಗರ ಜಿಲ್ಲೆ
8ನೇ ವಾರ್ಡ, ಕೊಂಡನಾಯಕನಹಳ್ಳಿ
ಹೊಸಪೇಟೆ- 583239
ಮೊಬೈಲ್: 9880746551

ಗಾಂಧಿ ವಿಚಾರ ವೇದಿಕೆ(ರಿ)ವಿಜಯನಗರ ಜಿಲ್ಲೆ – ನಡವಳಿಗಳು

Leave a Reply

Your email address will not be published. Required fields are marked *