ಪುಸ್ತಕ ಅನಾವರಣಗೊಂಡ ನಂತರದ ವರದಿಗಳು ಈ ಲಿಂಕ್ ನಲ್ಲಿವೆ : https://gvv-info.yehoshua.faith/events/2023/minugu-nota-2023/
ಹಿಂದಿನ ಮಾಹಿತಿ ಈ ಸಾಲಿನ ಕೆಳಗಡೆ ಇದೆ.

ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆ ಮತ್ತು ಪ್ರಸ್ತುತಿ.

ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.

ಮಾನ್ಯರೆ,

ನಮಸ್ತೆ. ನಾನು ಅರವಿಂದ ಚೊಕ್ಕಾಡಿ. (04-Dec-2022)

ನಮ್ಮ ಗಾಂಧಿ ವಿಚಾರ ವೇದಿಕೆಯಿಂದ ‘ ಮಿನುಗು ನೋಟ: ಗಾಂಧಿ ಪ್ರಶ್ನೆ- ಉತ್ತರ’ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ.‌ ಗಾಂಧೀಜಿಯ ಕುರಿತಾದ ತಪ್ಪು ವ್ಯಾಖ್ಯಾನದ ಪ್ರಶ್ನೆಗಳಿಗೆ ಉತ್ತರವಾಗಿ ಈ ಕೃತಿ ಇದೆ. ಸಾಕಷ್ಟು ಚಿಂತನಶೀಲರ ಸಲಹಾ ಮಂಡಳಿಯ ಸಲಹೆಯ ಮೇರೆಗೆ ಎಂ. ಜಿ.‌ ಹೆಗಡೆಯವರು ಈ ಪುಸ್ತಕವನ್ನು ಬರೆದಿದ್ದಾರೆ.

ಇದರ ಬಿಡುಗಡೆಯನ್ನು ಮಂಗಳೂರಿನಲ್ಲಿ ಜನವರಿ 15 ಭಾನುವಾರ ಎಂದು ಅಂದಾಜು ಮಾಡಿಕೊಂಡಿದ್ದೇವೆ( ಇದೇ ಅಂತಿಮ‌ ಎಂದಲ್ಲ.‌ಈ ಬಗ್ಗೆ ಮುಂದೆ ತಿಳಿಸಲಾಗುವುದು). 14 ರಂದು ಮಕರ ಸಂಕ್ರಾಂತಿ ರಜೆ ಇರುವುದರಿಂದ ಆ ವಾರ ವಿಶ್ರಾಂತಿಯೇ ಇಲ್ಲ ಎನ್ನುವ ಭಾವನೆ ಬರಲು ಅವಕಾಶ ಇರುವುದಿಲ್ಲ.

ಸಭೆಗೆ ಬಂದಿರುವ ಅತ್ಯಂತ ಹಿರಿಯರಾದವರು ಪುಸ್ತಕ ಬಿಡುಗಡೆ ಮಾಡುತ್ತಾರೆ. ತಕ್ಚಣ ಪುಸ್ತಕವನ್ನು ಎಲ್ಲರಿಗೂ ನೀಡಲಾಗುತ್ತದೆ.‌ ನಂತರ ಎಂ.‌ಜಿ.‌ಹೆಗಡೆಯವರೇ ಪುಸ್ತಕದ ಬಗ್ಗೆ ವಿವರಿಸುತ್ತಾರೆ. ನಂತರ ಇಂತಹ ಪುಸ್ತಕದ ಅಗತ್ಯದ ಬಗ್ಗೆ ಯಾರು ಬೇಕಾದರೂ ಎರಡೆರಡು ನಿಮಿಷ ಮಾತನಾಡಬಹುದು. ಅವುಗಳನ್ನು ವೀಡಿಯೋ ಮಾಡಿ ಬಳಸಲಾಗುತ್ತದೆ. ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಶುರುವಾಗುತ್ತದೆ. 1 ಗಂಟೆಗೆ ಊಟ. 1.30 ರ ನಂತರ ಗಾಂಧಿ ವಿಚಾರ ವೇದಿಕೆಗೆ ಸೇರಬಯಸುವವರು ಸೇರಲು, ಪುಸ್ತಕವನ್ನು ಸಮಾಜಕ್ಕೆ ಹೇಗೆ ತಲುಪಿಸಬೇಕು ಎಂದು ಸಲಹೆ ಪಡೆಯಲು, ಗಾಂಧಿ ವಿಚಾರ ವೇದಿಕೆ ಮುಂದೆ ಹೇಗೆಲ್ಲ ಕಾರ್ಯ ನಿರ್ವಹಿಸಬೇಕು ಎಂದು ಚರ್ಚಿಸಲು ಅವಕಾಶ. 4 ಗಂಟೆಗೆ ಕಾರ್ಯಕ್ರಮ ಮುಗಿಯುತ್ತದೆ.

ಗಾಂಧೀಜಿಯ ಮೇಲಿನ ಅಪಪ್ರಚಾರದ ಸಮಯದಲ್ಲಿ ಗಾಂಧೀಜಿಯ ಹೆಸರಿನಲ್ಲಿ ಒಂದಷ್ಟು ಸೆನ್ಸಿಬಲ್ ಜನರು ಸೇರುವ ಸಭೆಯೇ ಸಮಾಜಕ್ಕೆ ಒಂದು ಸಂದೇಶ ಆಗಬೇಕು ಎಂದು ನಮ್ಮ ಉದ್ದೇಶವಾಗಿದೆ. ಯಾರಿಗೆ ಯಾರು ವಿರೋಧಿಯೇ ಆಗಿರಲಿ ವಿರೋಧಿಯ ಮೇಲೆ ನಿಂದನಾತ್ಮಕ ಪದ ಬಳಸಲು ಅವಕಾಶ ಇರುವುದಿಲ್ಲ.‌ಮತ್ತು ತನ್ನದಲ್ಲದ ವಿಚಾರ ಉಳ್ಳವರೆಲ್ಲ ಕೆಟ್ಟವರು ಮತ್ತು ಕಾಳಜಿ ಇಲ್ಲದವರು ಎಂದು ಭಾವಿಸುವವರಿಗೆ ಅವಕಾಶವಿರುವುದಿಲ್ಲ.

ನನ್ನ ದೃಷ್ಟಿಯಲ್ಲಿ ನೀವು ಈ ಸಭೆಗೆ ಹಾಜರಾಗಬೇಕಾದವರಲ್ಲೊಬ್ಬರು ಎಂದು ನನಗನಿಸಿದ್ದರಿಂದ ನಿಮಗೆ ಈ ಸಂದೇಶವನ್ನು ಕಳಿಸಿದ್ದೇನೆ. ನಿಮಗೂ ನಿಮ್ಮ‌ ಪರಿಚಯದ ಯಾರನ್ನಾದರೂ ಇದಕ್ಕೆ ಕರೆತರಬೇಕು ಎನಿಸಿದರೆ ಪ್ರಾರಖಭದಲ್ಲಿರುವ ನನ್ನ ಹೆಸರನ್ನು ತೆಗೆದು ನಿಮ್ಮ‌ ಹೆಸರು ಹಾಕಿ ಅವರಿಗೆ ಈ ಸಂದೇಶವನ್ನು ಕಳಿಸಿ.

ಗಾಂಧಿ ವಿಚಾರ ವೇದಿಕೆಯ ಬಳಿ ಹಣ ಇಲ್ಲದಿರುವುದರಿಂದ ಪ್ರಯಾಣ ಭತ್ತೆ ಕೊಡಲು ಸಾಧ್ಯವಾಗುತ್ತಿಲ್ಲ.‌ ಊಟ ಮತ್ತು ಸಮಾರಖಭದ ಖರ್ಚನ್ನು ಗಾಂಧಿ ವಿಚಾರ ವೇದಿಕೆಯೇ ಮಾಡಲಿದೆ.

ನಿಮಗೆ ಒಪ್ಪಿಗೆ ಇದ್ದರೆ ದಯವಿಟ್ಟು ತಿಳಿಸಿ.

– ಅರವಿಂದ ಚೊಕ್ಕಾಡಿ.

ಮಿನುಗು-ನೋಟ ಎಮ್. ಜಿ. ಹೆಗಡೆ ಯವರ ಕೃತಿ. – ಗಾಂಧಿ ಕುರಿತ ಪ್ರಶ್ನೆ ಉತ್ತರ.

Leave a Reply

Your email address will not be published. Required fields are marked *